ಮೈಸೂರು,ಫೆಬ್ರವರಿ,16,2021(www.justkannada.in) : ಪಿಟಿಸಿಎಲ್ ಕಾಯ್ದೆ ತಿದ್ದುಪಡಿ, ಕೃಷಿ ಹಾಗೂ ಗೋಹತ್ಯಾ ಕಾಯಿದೆಗಳ ರದ್ದು, ತೈಲ ಮತ್ತು ಸಿಲಿಂಡರ್ ಬೆಲೆ ಇಳಿಸುವಂತೆ ಆಗ್ರಹಿಸಿ ಭಾರತೀಯ ಪರಿವರ್ತನ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಕಾರರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ದಿನನಿತ್ಯ ಬಳಕೆಯ ಗ್ಯಾಸ್, ಪೆಟ್ರೋಲ್, ಡೀಸೆಲ್ ದರವನ್ನು ಈ ಕೂಡಲೇ ಕೇಂದ್ರ ಸರ್ಕಾರ ಇಳಿಸಬೇಕು. ಕೃಷಿ ಹಾಗೂ ಗೋಹತ್ಯಾ ಕಾಯಿದೆಗಳನ್ನು ಕೂಡಲೇ ರದ್ದುಗೊಳಿಸಬೇಕು, ಬಡ ನಿರುದ್ಯೋಗಿ ಪದವೀಧದರಿಗೆ ಕೃಷಿ ಭೂಮಿ ಹಂಚಬೇಕು ಎಂದು ಪ್ರತಿಭಟನಾಕಾರರ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾರತೀಯ ಪರಿವರ್ತನ ಸಂಘದ ಸಂಚಾಲಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
key words : Agriculture-well-Gohahata-Acts-Cancel-lower-price-oil-cylinder-Ask-Protest