ಮೈಸೂರು,ಫೆಬ್ರವರಿ,23,2022(www.justkannada.in): ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಷನಲ್ ಅಸೆಸ್ ಮೆಂಟ್ ಅಂಡ್ ಅಕ್ರಿಡೇಷನ್ ಕೌನ್ಸಿಲ್ -ನ್ಯಾಕ್ ) ನಡೆಸಿದ ಸಾಂಸ್ಥಿಕ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮೈಸೂರಿನ ಪತಿಷ್ಠಿತ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಬಿ++ ಗ್ರೇಡ್ ಮಾನ್ಯತೆ ದೊರೆತಿದ್ದು, ನ್ಯಾಕ್ ಶ್ರೇಯಾಂಕ ಕುಸಿತ ಹಿನ್ನೆಲೆ ಮರು ಮೌಲ್ಯಮಾಪನ ಮಾಡುವಂತೆ ಮತ್ತೆ ನ್ಯಾಕ್ ಮೊರೆ ಹೋಗಲು ಐಷ್ ನಿರ್ದೇಶಕಿ ಎಂ.ಪುಷ್ಪಾವತಿ ನಿರ್ಧರಿಸಿದ್ದಾರೆ.
ಹಿಂದಿನ ಬಾರಿ ನ್ಯಾಕ್ ನಡೆಸಿದ ಮೌಲ್ಯಾಂಕನದಲ್ಲಿ ಎ ಗ್ರೇಡ್ ಮಾನ್ಯತೆ ಪಡೆದಿದ್ದ ಐಷ್ ಈ ಬಾರಿ ಬಿ++ ಗ್ರೇಡ್ ಗೆ ಕುಸಿದಿದೆ. 2021ರ ಡಿಸೆಂಬರ್ 29, 30ರಂದು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ನೀಡಿ, ಅದರ ಶೈಕ್ಷಣಿಕ ನಿರ್ವಹಣೆ ಕುರಿತು ನ್ಯಾಕ್ ತಂಡ ಪರಿಶೀಲನೆ ನಡೆಸಿತ್ತು. ಪೂರಕ ಆರೋಗ್ಯ ವಿಜ್ಞಾನ ಶೈಕ್ಷಣಿಕ ಸಂಸ್ಥೆ ಎಂಬುದಾಗಿ ಪರಿಗಣಿತವಾಗಿರುವ ಐಷ್ ಮೊದಲಿನಿಂದಲೂ ಉತ್ತಮ ಗ್ರೇಡ್ ನ ಸಂಸ್ಥೆ ಎಂದೇ ಮಾನ್ಯವಾಗಿದೆ. ಈ ಬಾರಿಯ ಮಾನ್ಯತೆ ಸಂದರ್ಭದಲ್ಲಿ ಎಂದಿನಂತೆ ಪಠ್ಯ, ಕಲಿಕೆ, ಬೋಧನೆ ಸಂಶೋಧನೆ, ಅವಿಷ್ಠಾರ, ಮೂಲ ಸೌಕರ್ಯ, ಕಲಿಕೆ ಸಂಪನ್ಮೂಲಗಳು, ವಿದ್ಯಾರ್ಥಿ ಬೆಂಬಲ ಹಾಗೂ ಪ್ರಗತಿ, ಆಡಳಿತ, ನಾಯಕತ್ವ ಮತ್ತು ನಿರ್ವಹಣೆಯನ್ನು ಪರಿಶೀಲಿಸಲಾಗಿದೆ. ಐಷ್ ನ ಸಾಂಸ್ಥಿಕ ಮೌಲ್ಯಗಳು ಮತ್ತು ಒಳ್ಳೆಯ ಅಭ್ಯಾಸಗಳು ಪರೀಕ್ಷೆಗೆ ಒಳಪಟ್ಟಿವೆ. ಈ ಎಲ್ಲದರ ಆಧಾರದ ಮೇಲೆ ನ್ಯಾಕ್ ಇತ್ತೀಚಿಗಷ್ಟೇ ಸಂಸ್ಥೆಗೆ ಬಿ ಡಬಲ್ ಪ್ಲಸ್ ಗ್ರೇಡ್ ಪ್ರಕಟಿಸಿತ್ತು.
ಆದರೆ ನ್ಯಾಕ್ ನೀಡಿರುವ ಈ ಗ್ರೇಡ್ ಸಂಸ್ಥೆಯ ನಿರ್ದೇಶಕಿ ಎಂ. ಪುಷ್ಪಾವತಿ ಅವರಿಗೆ ತೃಪ್ತಿ ನೀಡಿಲ್ಲ. ಹಾಗಾಗಿ, ಐಷ್ ಕಾರ್ಯಚಟುವಟಿಕೆಗಳ ಕುರಿತು ಮತ್ತೊಮ್ಮೆ ಮೌಲ್ಯಮಾಪನ ಮಾಡಿ ಎಂದು ಮತ್ತೆ ನ್ಯಾಕ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಕಳೆದ ಬಾರಿ ನಡೆಸಿದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸಂಸ್ಥೆಗೆ ಎ ಮಾನ್ಯತೆ ದೊರೆತಿತ್ತು. ಹಿನ್ನಡೆಯಾದಂತಾಗಿದೆ.
Key words: AIISH-Grade- Director-M. Pushpawati