ಮೈಸೂರು,ಮೇ,3,2019(www.justkannada.in): ಇತ್ತೀಚೆಗೆ ಹಿಮಾಚಲ ಪ್ರದೇಶದ ಸೊಲಾನ್ ನಲ್ಲಿ ನಡೆದ 86 ನೇ ರಾಷ್ಟ್ರೀಯ ಸೆಮಿನಾರ್ ಕಮ್ ಹಿಂದಿ ಕಾರ್ಯಾಗಾರದಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ವತಿಯಿಂದ ಇಬ್ಬರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ದೆಹಲಿಯ ರಾಜ್ಭಾಶಾ ಸಂಸ್ಥಾನ ಆಯೋಜಿಸಿದ್ದ ಈ ಕಾರ್ಯಗಾರದಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಪರವಾಗಿ ಸಹಾಯಕ ರಿಜಿಸ್ಟ್ರಾರ್ ಎನ್. ಪರಿಮಳ ಮತ್ತು ಪ್ರಚಾರ ಮತ್ತು ಮಾಹಿತಿ ಅಧಿಕಾರಿ ಎ.ಆರ್ ಕೀರ್ತಿ ಪಾಲ್ಗೊಂಡಿದ್ದರು.
ಕಾರ್ಯಗಾರದಲ್ಲಿ ಸಹಾಯಕ ರಿಜಿಸ್ಟ್ರಾರ್ ಎನ್.ಪರಿಮಳ ಅವರು ‘ಸಂಸ್ಥೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ’ ವಿಷಯ ಮಂಡಿಸಿದರೇ, ಪ್ರಚಾರ ಮತ್ತು ಮಾಹಿತಿ ಅಧಿಕಾರಿ A.R. ಕೀರ್ತಿ ಅವರು ‘ಸನ್ನಾತಾ ಔರ್ ಸಂಚಾರ್’ ಎಂಬ ಶೀರ್ಷಿಕೆಯಲ್ಲಿ ವಿಚಾರ ಪ್ರಸ್ತುತಪಡಿಸಿದರು.
ಐಶ್(AIISH) ಸಂಸ್ಥೆಗೆ ಅಧಿಕೃತ ಭಾಷೆ ಹಿಂದಿಯಲ್ಲಿ ಉತ್ತಮ ರೆಫರೆನ್ಸ್ ಮೆಟಿರಿಯಲ್ ಪ್ರಕಟಣೆಗಾಗಿ ಕಾರ್ಯಾಲಯ್ ಜ್ಯೋತಿ/ ದೀಪಾ ಸ್ಮೃತಿ ಚಿನ್ ಪುರಸ್ಕಾರ್ ಪ್ರಶಸ್ತಿ ಹಾಗೂ 2017-18ನೇ ಸಾಲಿನ ಹಿಂದಿ ವಾರ್ಷಿಕ ವರದಿ ಉತ್ತಮ ಪ್ರಕಟಣೆಗಾಗಿ ಕಾರ್ಯಾಲಯ್ ದರ್ಪಣ್ ಸ್ಮೃತಿ ಚಿನ್ ಪುರಸ್ಕಾರ್ ಪ್ರಶಸ್ತಿ ದೊರಕಿದೆ.
Key words: AIISH- participated – 86th National- Seminar –Cum- Hindi -Workshop -Himachal Pradesh