AIISH ಸೇವೆ ಬಗ್ಗೆ ಬೆಳಕು ಚೆಲ್ಲುವಲ್ಲಿ ಮಾಧ್ಯಮಗಳು ವಿಫಲ : ಹಿರಿಯ ಪತ್ರಕರ್ತ ಚೀ.ಜ.ರಾಜೀವ್‌

 

ಮೈಸೂರು, ಅ.21,2024: (www.justkannada.in news) ಎಲ್ಲ ರಾಜಕೀಯ ಪಕ್ಷಗಳು ಕೂಡ ಸಂವಿಧಾನ ಹಾಗೂ ಸಮಾನ ಅವಕಾಶದ ಕುರಿತು ಮಾತನಾಡಲಾರಂಭಿಸಿವೆ. ಜಾತಿ ಗಣತಿ, ಒಳ ಮೀಸಲು ಹೀಗೆ ಬೇರೆ ಬೇರೆ ಪರಿಭಾಷೆಯಲ್ಲಿ ಇದು ವ್ಯಕ್ತವಾಗುತ್ತಲೇ ಇದೆ. ಆದರೆ, ವಾಕ್, ಶ್ರವಣದ ದೋಷ ಹೊಂದಿರುವವರ, ವಿಶೇಷ ಚೇತನರ ಸಂದರ್ಭದಲ್ಲಿ ಸಮಾನ ಅವಕಾಶ ಸಿಕ್ಕಿದೆಯೇ ? ಎಂದು ಪ್ರಶ್ನಿಸಿದಾಗ ಇಲ್ಲ ಎಂದೇ ಹೇಳಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ, ವಿಜಯಕರ್ನಾಟಕ ಪತ್ರಿಕೆಯ ಸುದ್ಧಿ ಸಂಪಾದಕ ಚೀ.ಜ.ರಾಜೀವ್‌ ವಿಷಾಧ ವ್ಯಕ್ತಪಡಿಸಿದರು.

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ವತಿಯಿಂದ ಇಂದು  “ ಎನಾನ್ಸಿಂಗ್ ಸ್ವೀಚ್ ಫ್ಲೂಯೆನ್ಸಿ ಎವಿಡೆನ್ಸ್ ಬೇಸ್ಡ್ ಅಪ್ರೋಚಸ್ ಫಾರ್ ಕ್ಲಿನಿಕಲ್ ಪ್ರಾಕ್ಟೀಸ್  “ ಎಂಬ ವಿಚಾರ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸುದ್ಧಿ ಸಂಪಾದಕ ಚೀ.ಜ.ರಾಜೀವ್‌ ಮಾತನಾಡಿ ಹೇಳಿದಿಷ್ಟು..

ಆದರೆ  ಈ ಕೆಲಸವನ್ನು ಆಯಿಷ್ ನಂಥ ಸಂಸ್ಥೆಗಳು ಸದ್ದಿಲ್ಲದೇ ಮಾಡುತ್ತಿವೆ. ಮೇಲ್ನೋಟಕ್ಕೆ ಆಯಿಷ್ ಕೇವಲ ಚಿಕಿತ್ಸೆ ನೀಡುತ್ತಿದೆ ಎನಿಸಿದರೂ. ಆಳದಲ್ಲಿ ಈ ಸೇವೆ ಕೇವಲ ಚಿಕಿತ್ಸೆಯೊಂದೇ ಆಗಿರುವುದಿಲ್ಲ. ಏಕೆಂದರೆ, ಇಲ್ಲಿ ಚಿಕಿತ್ಸೆ ಪಡೆದವರು ಸಮಾನ ಅವಕಾಶ ಪಡೆಯಲು ಅರ್ಹರಾಗುತ್ತಾರೆ. ಈ ಜನರಿಗೆ ಸಮಾನ ಅವಕಾಶ ಕಲ್ಪಿಸುವುದು ಸರಕಾರದ ಕೆಲಸ. ಆದರೆ, ಅದನ್ನು ಪಡೆಯಲು ಜನರನ್ನು ಸಿದ್ಧಪಡಿಸುವುದು ಕೂಡ ದೊಡ್ಡ ಕಾರ್ಯವೇ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈಗಂತೂ ನಾವು ಎಐ ಯುಗದಲ್ಲಿದ್ದೇವೆ. ಈ ಸಂಸ್ಥೆ ಟೆಕ್ನಾಲಜಿಯ ಪ್ರಯೋಜನ ಪಡೆದು, ಗರಿಷ್ಠ ಜನರನ್ನು ತಲುಪಬಹುದಾಗಿದೆ.  ಮೊದಲೆಲ್ಲಾ ಕಣ್ಣು ಕಾಣದ ಕುರುಡರು ಓದಲು ಬ್ರೈಲ್ ಲಿಪಿಯನ್ನೇ ಅವಲಂಬಿಸಬೇಕಾಗಿತ್ತು. ಆದರೆ ಈಗ ಎಲ್ಲ ಜ್ಞಾನವನ್ನು ಆಡಿಯೋ ಮಾಡಲು ಸಾಧ್ಯವಿದೆ. ಕುರುಡರಿಗೆ ಬ್ರೈಲ್ ಲಪಿಯೇ ಬೇಕಿಲ್ಲ. ಅವರು ಆಡಿಯೋ ಮೂಲಕ ಕಲಿತು, ನಮ್ಮಷ್ಟೇ ಸಾಮರ್ಥ್ಯವನ್ನು ಪಡೆಯಬಹುದು. ಕಿವುಡರು ಟೆಕ್ನಾಲಜಿ ನೆರವಿನಿಂದ ಪರದೇ ನೋಡಿಯೇ ಸಾಕಷ್ಟು ಕೆಲಸ ಮಾಡಬಹುದು.

ಇದೇ ರೀತಿ, ತೊದಲುವಿಕೆ ಸಮಸ್ಯೆಯಿಂದ ಬಳಲುತ್ತಿರುವವರನ್ನೂ ನಾವು ಸಜ್ಜು ಮಾಡಬೇಕಿದೆ. ಈ ವಿಷಯ ಕುರಿತು ಈ ಸಂಕಿರಣ ಚರ್ಚೆ ಮಾಡಿಯೇ ಮಾಡುತ್ತದೆ. ಇಂಥಾ ಸಾಧ್ಯತೆಗಳನ್ನು ನೀವು ಶೋಧಿಸಬೇಕಿದೆ ಎಂದರು.

ಆಯಿಷ್ ನಂಥ ಸಂಸ್ಥೆಗಳಲ್ಲಿ ಏನು ಕೆಲಸ ನಡೆಯುತ್ತಿದೆ ಎಷ್ಟೊಂದು ಅತ್ಯುತ್ತಮ ಸೇವೆ ಇಲ್ಲಿ ದೊರೆಯುತ್ತಿದೆ ಎಂಬುದನ್ನು ಜನರಿಗೆ ತಲುಪಿಸವಲ್ಲಿ ನಾವು ಮೀಡಿಯಾದವರು ಕೂಡ ಹಿಂದೆ ಬಿದ್ದಿದ್ದೇವೆ.  ಈ ವಿಷಯದಲ್ಲಿ ನಾವೂ ಆತ್ಮಾವಲೋಕನ ಮಾಡಿಕೊಳ್ಳುವುದು ಸಾಕಷ್ಟಿದೆ ಎಂದ ರಾಜೀವ್‌,  ಅಮೆರಿಕಾದ ಅಧ್ಯಕ್ಷನಾಗಿದ್ದ ರೂಸ್ ವೆಲ್ಟ್ ಆ ದೇಶದ ನಿರ್ಮಾಪಕ. ಪೊಲೀಯೋ  ಕಾರಣಕ್ಕೆ ತನ್ನ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡಿದ್ದ. ಆದರೂ ಎರಡು ಅವಧಿಗೆ ಅಮೆರಿಕಾದ ಅಧ್ಯಕ್ಷನಾಗಿದ್ದ.  ಇಂಥಾ ಸಮಸ್ಯೆಗಳಿಂದ ಬಳಲುತ್ತಿರುವ ಜನ ಮುಖ್ಯವಾಹಿನಿಗೆ ಬರಬೇಕು ಎಂದರೆ, ಇಂಥಾ ಮಕ್ಕಳ ಪಾಲಕರ ಸಂಘಗಳು ಕ್ರಿಯಾಶೀಲರಾಗಬೇಕು ಎನ್ನುತ್ತಿದ್ದ. ಈ ಸಂಸ್ಥೆಯಲ್ಲಿ ಅಂಥ ಪಾಲಕರ ಸಂಘಗಳು ಕ್ರಿಯಾಶೀಲವಾಗಲಿ ಎಂದು ಆಶಿಸುವೆ ಎಂದರು.

ಸಮಾರಂಭದಲ್ಲಿ ಐಷ್‌ ನಿರ್ದೇಶಕಿ ಡಾ.ಪುಷ್ಪಾವತಿ, ಡಾ.ಸಂಗೀತ ಮಹೇಶ್, ಡಾ.ಸಂತೋಷ್ ಮತ್ತು  ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

key words:  AIISH, Senior journalist Ch J Rajeev, national seminar, Dr.Pushpavathi, Director

 

SUMMARY:

Media failed to shed light on AIISH services: Senior journalist Ch J Rajeev

The All India Institute of Speech and Hearing (AIISH) organised a national level seminar on “Enhancing Speach Fluency Evidence Based Approaches for Clinical Practice” here today