ನವದೆಹಲಿ, ಅಕ್ಟೋಬರ್ 4, 2021 (www.justkannada.in): ರಸ್ತೆಯಲ್ಲಿರುವ ಪಾದಚಾರಿ ಮೇಲ್ಸೇತುವೆ ಕೆಳಗೆ ವಿಮಾನವೊಂದು ಸಿಲುಕಿಕೊಂಡಿರುವ ದೃಶ್ಯವನ್ನು ನೀವು ಎಲ್ಲಾದರೂ ಕಂಡಿರುವಿರಾ?! ಹಾಗಾದರೆ ಇಲ್ಲೊಂದು ಸುದ್ದಿ ಇದೆ ನೋಡಿ. ನವದೆಹಲಿಯಲ್ಲಿ ಪಾದಚಾರಿ ಮೇಲ್ಸೇತುವೆಯಡಿ ಭಾನುವಾರ ಬೆಳಿಗ್ಗೆ ಏರ್ ಇಂಡಿಯಾದ ವಿಮಾನವೊಂದು ಸಿಲುಕಿಕೊಂಡು, ದೆಹಲಿ-ಗುರುಗ್ರಾಂ ಹೆದ್ದಾರಿಯ ಸುತ್ತಮುತ್ತಲಿನ ಜನರನ್ನು ಆಶ್ಚರ್ಯಗೊಳಿಸಿದ ಸುದ್ದಿ ವರದಿಯಾಗಿದೆ.
ಹಾಗಾದರೆ ಆ ವಿಮಾನ ಅಲ್ಲಿಗೆ ಹೇಗೆ ಬಂತು ಎಂದಿರಾ? ಏರ್ ಇಂಡಿಯಾದ ಅಧಿಕಾರಿಗಳ ಪ್ರಕಾರ ಇದು ಅಪಘಾತದಿಂದ ಸಂಭವಿಸಿದ್ದಲ್ಲ. ಈ ವಿಮಾನವನ್ನು ಸಾಗಿಸುತ್ತಿದ್ದ ಸಿಬ್ಬಂದಿಗಳು ಈ ಸೇತುವೆಯ ಎತ್ತರವನ್ನು ಅಂದಾಜಿಸುವಲ್ಲಿ ಮಾಡಿರುವ ತಪ್ಪಿನಿಂದಾಗಿ ಇಂತಹ ವಿಲಕ್ಷಣವಾದ ಸ್ಥಳದಲ್ಲಿ ವಿಮಾನ ಸಿಲುಕಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಕುರಿತಾದ ಒಂದು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಆ ವೀಡಿಯೊದಲ್ಲಿ ನೀರಿನಿಂದ ಹೊರಕ್ಕೆ ಬಂದ ಮೀನಿನ ಹಾಗೆ ಕಾಣುತ್ತಿದ್ದಂತಹ ಬೃಹತ್ ಗಾತ್ರದ ವಾಹನವೊಂದು ಹೆದ್ದಾರಿಯನ್ನು ಬ್ಲಾಕ್ ಮಾಡಿದ್ದು, ಜನರು ಅಕ್ಕಪಕ್ಕದಿಂದ ಹಾದು ಹೋಗುತ್ತಿರುವ ದೃಶ್ಯ ಕಂಡು ಬಂತು.
“ಆದರೆ ಆ ವಿಮಾನ ದೆಹಲಿ ವಿಮಾನನಿಲ್ದಾಣದದ ಗುಂಪಿಗೆ ಸೇರಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಹಾಗೂ ಆ ವೀಡಿಯೊದಲ್ಲಿ ಆ ವಿಮಾನವನ್ನು ರೆಕ್ಕೆಗಳಿಲ್ಲದೆ ಸಾಗಿಸಲಾಗುತ್ತಿರುವುದು ಕಂಡು ಬರುತ್ತದೆ. ಅದೊಂದು ಸ್ಕ್ರ್ಯಾಪ್ ವಿಮಾನವಾಗಿದ್ದು, ಅದನ್ನು ಸಾಗಿಸುವಾಗ ವಾಹನದ ಚಾಲಕ ಅದನ್ನು ಸಾಗಿಸುವಾಗ ತಪ್ಪಾದ ನಿರ್ಣಯವನ್ನು ತೆಗೆದುಕೊಂಡಿರಬಹುದು,” ಎಂದು ಏರ್ ಇಂಡಿಯಾದ ವಕ್ತಾರರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Air India- flight- beneath – pedestrian – near- Delhi airport.