ನವದೆಹಲಿ, ಜನವರಿ 27,2022(www.justkannada.in): ಭಾರತದ ಪ್ರತಿಷ್ಟಿತ ಏರ್ ಇಂಡಿಯಾ ಸಂಸ್ಥೆಯನ್ನು ಅಧಿಕೃತವಾಗಿ ಟಾಟಾ ಗ್ರೂಪ್ಗೆ ಹಸ್ತಾಂತರಿಸಲಾಗಿದೆ. ಇಂದು ಹಸ್ತಾಂತರ ಪ್ರಕ್ರಿಯೆಯನ್ನ ಕೇಂದ್ರ ಸರ್ಕಾರ ಪೂರ್ಣಗೊಳಿಸಿದೆ.
ಟಾಟಾ ಗ್ರೂಪ್ ಕಂಪನಿಯ ಎನ್ ಚಂದ್ರಶೇಖರನ್ ಗುರುವಾರ ಕಂಪನಿ ಅಧಿಕೃತವಾಗಿ ಟಾಟಾ ಗ್ರೂಪ್ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಡೆಸಲಾಯಿತು. ಏರ್ ಲೈನ್ಸ್ ಹೌಸ್ ನಲ್ಲಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಿತು.
ಕಳೆದ ವರ್ಷ ಆಗಸ್ಟ್ ನಲ್ಲಿ ಟಾಟಾ ಕಂಪನಿ ಬಿಡ್ಡಿಂಗ್ ಗೆದ್ದಿತ್ತು. ಏರ್ ಇಂಡಿಯಾವನ್ನ 18 ಸಾವಿರ ಕೋಟಿ ರೂ.ಗೆ ಕೇಂದ್ರ ಸರ್ಕಾರ ಮಾರಾಟ ಮಾಡಿತ್ತು. ಇದೀಗ ಟಾಟಾ ಮಾಲೀಕತ್ವಕ್ಕೆ ಏರ್ ಇಂಡಿಯಾ ಹಸ್ತಾಂತರಿಸಲಾಗಿದೆ ಹಸ್ತಾಂತರ. 69 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾ ಟಾಟಾ ಗ್ರೂಪ್ ತೆಕ್ಕೆಗೆ ಬಂದಿದೆ.
ಜೆಆರ್ ಡಿ ಟಾಟಾ 1932ರಲ್ಲಿ ಟಾಟಾ ಏರ್ ಲೈನ್ಸ್ ಎಂಬ ವಿಮಾನಯಾನ ಕಂಪನಿ ಆರಂಬಿಸಿದ್ದರು. 1946ರವರೆಗೂ ಅದು ಟಾಟಾ ಏರ್ ಲೈನ್ಸ್ ಆಗಿತ್ತು. ನಂತರ 1946ರಲ್ಲಿ ಅದನ್ನ ಏರ್ ಇಂಡಿಯಾ ಎಂದು ಬದಲಾಯಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿತ್ತು. ಆರ್ ಜೆಡಿ ಟಾಟಾ ಅವರು 1978ರವರೆಗೆ. . ಇದೀಗ ಮತ್ತೆ ಸರ್ಕಾರದಿಂದ ಟಾಟಾ ಕಂಪನಿ ಏರ್ ಇಂಡಿಯಾವನ್ನ ವಶಕ್ಕೆ ಪಡೆದಿದ್ದು, ಏರ್ ಇಡಿಯಾ ಸೇವೆ ಸುಧಾರಣೆಗೆ ಪ್ಲಾನ್ ರೂಪಿಸಿದೆ. ಹೊಸ ಆಡಳಿತ ಮಂಡಳಿ ನೇಮಿಸಲಿದೆ ಎನ್ನಲಾಗಿದೆ.
Key words: air india- Tata Group- again