ಬೆಂಗಳೂರಿನಲ್ಲಿ ವೈಮಾನಿಕ ಮಹಾ ಕುಂಭಮೇಳ: ಏರ್ ಶೋ ಉದ್ಘಾಟಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್ ನುಡಿ

ಬೆಂಗಳೂರು,ಫೆಬ್ರವರಿ,10,2025 (www.justkannada.in):  ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಅಧ್ಯಾತ್ಮದ ಮಹಾಕುಂಭ ಮೇಳ ನಡೆಯುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ದೋಪಕರಣಗಳ ವಿಮಾನ ಹಾರಾಟ ನಡೆಯುತ್ತಿದೆ. ವೈಮಾನಿಕ ಮಹಾ ಕುಂಭಮೇಳ ನಡೆಯುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದರು.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ 2025  ಉದ್ಘಾಟಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬೆಂಗಳೂರಿನ ವಾಯುನೆಲೆಯಲ್ಲಿ ಏರ್ ಶೋ,  ಒಂದು ಕಡೆ ಪರಂಪರೆ ಸಂಸ್ಕೃತಿಯ ಮಹಾಕುಂಭ ಆಗುತ್ತಿದೆ. ಇನ್ನೊಂದೆಡೆ ತಂತ್ರಜ್ಞಾನದ ಯುದ್ದೋಪಕರಣಗಳ ವಿಮಾನ ಹಾರಾಟ. ಹೊಸ ಸವಾಲಿಗೆ ಉತ್ತರ ಹುಡುಕುವ ಕೆಲಸ ಆಗಬೇಕಿದೆ. ಶಾಂತಿ ಶಕ್ತಿ ನಮ್ಮ ಮಂತ್ರಬಲ ಆಗಬೇಕಿದೆ   ಬಲಾಢ್ಯರಾಗಿ ವಿಶ್ವದಲ್ಲಿ ನಮ್ಮ ಸ್ಥಾನ ಭದ್ರಪಡಿಸಿಕೊಳ್ಳಬೇಕಿದೆ.  ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ.  10 ವರ್ಷಗಳಿಂದ ವೈಮಾನಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ  ಮಾಡಲಾಗಿದೆ. ಬಜೆಟ್ ನಲ್ಲಿ 1080 ಲಕ್ಷ ಕೋಟಿ ಅನುದಾನವನ್ನ ಮೀಸಲಿಡಲಾಗಿದೆ ಎಂದರು.

ಏರೋ ಸ್ಪೇಸ್ ಮೂಲಕವೂ ಬೆಂಗಳೂರು ಹೆಸರುವಾಸಿಯಗುತ್ತಿದೆ.   ಅಂತರಂಗದ ಆಧ್ಯಾತ್ಮ ಶಕ್ತಿ ಪ್ರದರ್ಶನ ಆ ಕುಂಭಮೇಳದಲ್ಲಿ ನಡೆಯುತ್ತಿದ್ದರೆ, ಇದು ವಾಯುನೆಲೆಯಲ್ಲಿ ನಮ್ಮ ಬಹಿರಂಗ ಶಕ್ತಿ ಪ್ರದರ್ಶನ ಎಂದು ನುಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ , ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಉಪಸ್ಥಿತರಿದ್ದರು.

Key words: Air show, Bengaluru, Defence Minister, Rajnath Singh