ಅಹಮದಾಬಾದ್, ಜೂನ್ 13, 2019 (www.justkannada.in): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ ಚಂಡ ಮಾರುತ ಗಾಳಿ ಇದೀಗ ಪಥ ಬದಲಿಸಿದ್ದು, ಗುಜರಾತ್ಗೆ ಯಾವುದೇ ಅಪಾಯವಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಯು ಚಂಡಮಾರುತ ಗುಜರಾತಿನ ಕರಾವಳಿ ಪ್ರದೇಶವಾದ ಪೋರಬಂದರು ಪ್ರವೇಶಿಸಿ ಅಲ್ಲಿಂದ ಮಾರ್ಗ ಬದಲಾಯಿಸಿದೆ ಅದಕ್ಕೆ ಹವಾಮಾನವೇ ಕಾರಣ ಎನ್ನಲಾಗುತ್ತಿದೆ. ದ್ವಾರಕ, ಓಖಾದಲ್ಲಿ ಸ್ವಲ್ಪ ಪ್ರಭಾವವಿರಲಿದೆ.
ವಾಯು ಚಂಡಮಾರುತ ಕೆಟಗರಿ ಎರಡಾಗಿ ಪರಿವರ್ತನೆಯಾಗಿದೆ, ಇದು ಕೆಟಗರಿ ಒಂದಕ್ಕಿಂತ ಇದು ಕಡಿಮೆ ಪ್ರಭಾವವನ್ನು ಹೊಂದಿರುತ್ತದೆ. ಇದೀಗ ಗಂಟೆಗೆ 135-145 ಕಿ.ಮೀ ವೇಗದಲ್ಲಿ ಮಾರುತ ಗಾಳಿ ಬೀಸುತ್ತಿದೆ ಒಂದೊಮ್ಮೆ ಅದು ಗಂಟೆಗೆ 175 ಕಿ.ಮೀ ವೇಗದಲ್ಲಿ ಬೀಸಿದರೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ,.