ಮೈಸೂರು,ಮೇ,16,2019(www.justkannada.in): ಫಲಿತಾಂಶದಲ್ಲಿ ಗೊಂದಲ ಹಿನ್ನೆಲೆ ಮೈಸೂರಿನ ಗೋಕುಲಂನಲ್ಲಿರುವ ಕೆ ಪುಟ್ಟಸ್ವಾಮಿ ಪಿ ಯು ಕಾಲೇಜನಲ್ಲಿ ಗಲಾಟೆ ನಡೆದಿದೆ.
ಮೊದಲ ಪಿಯುಸಿ ಫಲಿತಾಂಶದಲ್ಲಿ ಗೊಂದಲ ಹಿನ್ನಲೆ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ನಡುವೆ ಜಟಾಪಟಿ ನಡೆದಿದೆ. ಆಡಳಿತ ಮಂಡಳಿ ವಿರುದ್ದ ರೊಚ್ಚಿ ಗೆದ್ದ ವಿದ್ಯಾರ್ಥಿಗಳು ಹಾಗೂ ಪೊಷಕರು ಆಡಳಿತ ಮಂಡಳಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜು ಪ್ರಾಂಶುಪಾಲರಾಗಿರುವ ಮೋಹನ್ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಗಲಾಟೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಾಳ ಠಾಣಾ ಪೊಲೀಸರು ಧಾವಿಸಿದ್ದು ಗಲಾಟೆ ತಡೆದಿದ್ದಾರೆ.
Key words: AK. Puttaswamy -PU College – Mysore-bother