‘ಗಾಂಧಿಗೆ ಒಂದು ಪತ್ರ’ ರಾಜ್ಯ ಮಟ್ಟದ ಲೇಖನ ಸ್ಪರ್ಧೆ…!

ಬೆಂಗಳೂರು,ಡಿಸೆಂಬರ್,22,2020(www.justkannada.in) :  ಸರ್ವೋದಯ ದಿನದ ಪ್ರಯುಕ್ತ ಕರ್ನಾಟಕ ಸರ್ವೋದಯ ಮಂಡಲವು ಮುಂಬರುವ 2021 ಜನವರಿ 30ರ ಸಂದರ್ಭ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.Teachers,solve,problems,Government,bound,Minister,R.Ashok

‘ಸರ್ವೋದಯ ಸಮಾಜ ಸೃಷ್ಟಿಯ ಸಾಧ್ಯತೆಗಳು -ಒಂದು ವಿಶ್ಲೇಷಣೆ’ ಲೇಖನದ ವಸ್ತುವಾಗಿದ್ದು, ಗಾಂಧಿ ಚಿಂತನೆ ಹಾಗೂ ಇಂದಿನ ಪರಿಸ್ಥಿತಿ ಮತ್ತು ಸವಾಲುಗಳನ್ನು ಕುರಿತು ‘ಗಾಂಧಿಗೆ ಒಂದು ಪತ್ರ’ ಈ ಎರಡು ಕನ್ನಡ ಲೇಖನ ಸ್ಪರ್ಧೆಗಳಲ್ಲಿ 15-30 ವಯೋಮಿತಿಯ ಯುವಜನರು ಮಾತ್ರ ಭಾಗವಹಿಸಬಹುದು.

ಪತ್ರ ಲೇಖನದಲ್ಲಿ ಭಾಗವಹಿಸುವ ಸ್ಪರ್ಧಿಗಳು ಕಡ್ಡಾಯವಾಗಿ ಅಂಚೆ ಕಚೇರಿಯಲ್ಲಿ ದೊರಕುವ ಅಂತರ್ದೇಶೀಯ ಪತ್ರ (ಇನ್‍ಲ್ಯಾಂಡ್ ಲೆಟರ್) ದಲ್ಲಿ ತಮ್ಮ ಸ್ವಂತ ಕೈ ಬರಹದಲ್ಲಿ ಬರೆಯಬೇಕು. ಉಳಿದಂತೆ ಲೇಖನ ಸ್ಪರ್ಧಿಗಳು ಎ4 ಅಳತೆಯ ಮೂರು ಪುಟಗಳಿಗೆ ಮೀರದಂತೆ ತಮ್ಮ ಬರಹಗಳನ್ನು ಸೀಮಿತಗೊಳಿಸಬೇಕು.A-Letter-Gandhi-State-Level-Article-Competition…!

ಕೃಪೆ : internetಸ್ಪರ್ಧಿಗಳು ತಮ್ಮ ಲೇಖನ,ಪತ್ರಗಳನ್ನು ಸಂಪಾದಕರು, ಅಮರ ಬಾಪು ಚಿಂತನ, ಗಾಂಧೀಭವನ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001 ಈ ವಿಳಾಸಕ್ಕೆ ಜನವರಿ 19, 2021ರೊಳಗೆ ತಲುಪುವಂತೆ ಕಳುಹಿಸಬೇಕು. ಸ್ಪರ್ಧಿಗಳು ತಮ್ಮ ಜನ್ಮ ದಿನಾಂಕ – ವರ್ಷ ಮತ್ತು ದೂರವಾಣಿ ಸಂಖ್ಯೆ ನಮೂದಿಸುವುದು ಕಡ್ಡಾಯ ಎಂದು ಆಯೋಜಕರು ತಿಳಿಸಿದ್ದಾರೆ.

key words : A-Letter-Gandhi-State-Level-Article-Competition…!