ಮೈಸೂರು,ಜೂ,2,2020(www.justkannada.in): ನಂಜನಗೂಡಿನಲ್ಲಿದ್ದ ಎಲ್ಲಾ ಕಂಟೈನ್ಮೆಂಟ್ ಜೋನ್ ಮುಕ್ತವಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದರು.
ಮೈಸೂರಿನಲ್ಲಿ ಈಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಢಿದ ಮೈಸೂರು ಎಸ್ಪಿ ರಿಷ್ಯಂತ್, ನಂಜನಗೂಡಿನಲ್ಲಿದ್ದ ಎಲ್ಲಾ ಕಂಟೈನ್ಮೆಂಟ್ ಜೋನ್ ಮುಕ್ತ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮಾರ್ಗ ಬದಲಾವಣೆ ಮಾಡಲಾಗಿದೆ. ಬಾವಲಿ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ಮುಂದುವರೆದಿದೆ. ಹೊರ ರಾಜ್ಯದ ಬಂದಿರುವವರ ಬಗ್ಗೆ ನಿಗಾ ಇಡಲಾಗಿದೆ. ಮದ್ಯ ಖರೀದಿಗೆ ಕೇರಳದಿಂದ ಬರುತ್ತಿರುವವರ ಬಗ್ಗೆ ಮಾಹಿತಿ ಇದೆ. ಇದಕ್ಕಾಗಿ ಅಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಕೊವೀಡ್ ವಿಚಾರವಾಗಿ ಮೈಸೂರಿನಲ್ಲಿ ಪೊಲೀಸ್ ಸಿಬ್ಬಂದಿಗೆ ಯಾರಿಗೂ ಕೊರೊನಾ ಬಂದಿಲ್ಲ. ಪೊಲೀಸ್ ಸಿಬ್ಬಂಧಿಗಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಟಿ.ನರಸೀಪುರ ಠಾಣೆಯಲ್ಲಿ ಬುಲೆಟ್ ನಾಪತ್ತೆ ಗಂಭೀರ ಪ್ರಕರಣ…
ಇನ್ನು ಟಿ.ನರಸೀಪುರ ಠಾಣೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ರಿಷ್ಯಂತ್, ಇದೊಂದು ಅಪರೂಪದ ಮತ್ತು ಗಂಭೀರವಾದ ಪ್ರಕರಣ. ಪೊಲೀಸ್ ಠಾಣೆಯಲ್ಲಿ ಬುಲೆಟ್ ಕಾಣೆಯಾಗುವುದು ಅಷ್ಟು ಸುಲಭದ ವಿಚಾರವಲ್ಲ. ಏನಾಗಿದೆ, ಆ ಬುಲೆಟ್ ಗಳು ಎಲ್ಲಿಗೆ ಹೋದವು. ಈ ಬಗ್ಗೆ ಯಾವುದರ ಬಗ್ಗೆಯು ಮಾಹಿತಿ ಇಲ್ಲ. ಎಲ್ಲಾ ಆಯಾಮಗಳಲ್ಲು ತನಿಖೆ ನಡೆಯುತ್ತಿದೆ. ಬುಲೆಟ್ ಜವಬ್ದಾರಿ ಠಾಣೆಯ ರೈಟರ್ ಗೆ ಇರುತ್ತೆ. ಇಡೀ ಠಾಣೆಯ ವಸ್ತುಗಳ ಜವಬ್ದಾರಿ ಠಾಣೆಯ ಇನ್ಸ್ಪೆಕ್ಟರ್ ಗೆ ಇರುತ್ತೆ. ಸಿಸಿ ಕ್ಯಾಮರಾ ಫೂಟೇಜ್ ಗಳನ್ನು ಪರಿಶೀಲನೆ ಮಾಡುತ್ತೇವೆ. ಈ ಬಗ್ಗೆ ಎಲ್ಲಾ ಆಯಾಮಗಳಲ್ಲು ಪರಿಶೀಲನೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಹಾಗೆಯೇ ಈ ಪ್ರಕರಣದ ತನಿಖಾಧಿಕಾರಿಯಾಗಿ ನಂಜನಗೂಡು ಡಿವೈಎಸ್ಪಿಯವರನ್ನು ನೇಮಕಮಾಡಲಾಗಿದೆ. ಬುಲೆಟ್ ನಾಪತ್ತೆ ಬಗ್ಗೆ ಮಾತ್ರ ಎಫ್ ಐ ಆರ್ ದಾಖಲಾಗಿದೆ. ಆದ್ರೆ ಎಫ್ ಐ ಆರ್ ನಲ್ಲಿ ಯಾರ ಹೆಸರನ್ನು ನಮೂದಿಸಲಾಗಿಲ್ಲ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹೇಳಿದರು.
Key words: All- Containment Zone –Nanjangud-Free-Mysore SP- Rishyanth