ಮೈಸೂರು,ಮಾ,20,2020(www.justkannada.in): ದೇಶದಾದ್ಯಂತ ಕೊರೋನಾ ವೈರಸ್ ಹರಡುವ ಭೀತಿ ಹೆಚ್ಚಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಫ್ಯೂ ಕರೆಗೆ ಮೈಸೂರಿನ ಹೋಟೆಲ್ ಮಾಲಿಕರ ಸಂಘ ಬೆಂಬಲ ನೀಡಿದೆ.
ಜನತಾ ಕರ್ಫ್ಯೂ ಕರೆಗೆ ಹೊಟೆಲ್ ಮಾಲಿಕರ ಸಂಘದ ಬೆಂಬಲ ಹಿನ್ನೆಲೆ ಭಾನುವಾರದಂದು ಎಲ್ಲಾ ಹೋಟೆಲ್ ಗಳು, ಬೇಕರಿಗಳು ಬಂದ್ ಆಗಲಿದೆ. ಈ ಬಗ್ಗೆ ಮಾತನಾಡಿರುವ ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣ ಗೌಡ. ಮೋದಿ ಕರೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಪ್ರತಿ ನಿತ್ಯ ಅಂದಾಜು 50 ಕೋಟಿ ರೂ. ನಷ್ಟವಾಗಿದೆ. ಮೈಸೂರಿನಲ್ಲಿ ಪ್ರವಾಸೋದ್ಯಮ ಕುಸಿದಿದೆ. ಕಳೆದ ಎರಡು ವಾರಗಳಿಂದ ಸಂಪೂರ್ಣ ಸ್ಥಬ್ಧವಾಗಿದೆ. ಮೈಸೂರಿನಲ್ಲಿ 1000 ಹೋಟೆಲ್ ಮಾಲೀಕರು ಇದ್ದೇವೆ. ಲಾಡ್ಜ್ 340, ಹೋಟೆಲ್ 400, ಬಾರ್ ಆ್ಯಂಡ್ ರೆಸ್ಟೋರೆಂಟ್ 130, ಬೇಕರಿ 300, ಸ್ವೀಟ್ ಅಂಗಡಿ 40 ಇವೆ. ಎಲ್ಲವೂ ನಷ್ಟದಲ್ಲಿವೆ. ಸದ್ಯಕ್ಕಂತೂ ನಾವು ಜಾಗೃತಿ, ಮುನ್ನೆಚ್ಚರಿಕೆ ಬಗ್ಗೆ ಆದ್ಯತೆ ನೀಡಿದ್ದೇವೆ. ರೋಗ ತಡೆಯುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.
ಹಾಗೆಯೇ ನಷ್ಟಕ್ಕೆ ಮುಂದಿನ ಹಂತದಲ್ಲಿ ಸರ್ಕಾರಕ್ಕೆ ಅಂಕಿ ಅಂಶಗಳ ಸಮೇತ ಮನವಿ ಮಾಡುತ್ತೇವೆ. ನವೀಕರಣ, ಜಿಎಸ್ಟಿ, ತೆರಿಗೆ, ಆದಾಯ ತೆರಿಗೆ, ದಂಡ ಮುಂತಾದವುಗಳಲ್ಲಿ ವಿನಾಯಿತಿ ಹೇಳುತ್ತೇವೆ. ಆದರೆ ಕೊರೋನಾ ತಡೆಗಟ್ಟವುದು ನಮ್ಮ ಸದ್ಯದ ಗುರಿ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.
Key words: All hotel- bakeries – bandh-Sunday – Mysore.