ಮುಂಬೈ,ಮಾರ್ಚ್,15,2024(www.justkannada.in): ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ವಿಶ್ವ ಗ್ರಾಹಕ ಹಕ್ಕುಗಳ ದಿನ 2024ನ್ನು ಆಯೋಜಿಸಲಾಗಿತ್ತು.
ಇಂದು ಮುಂಬೈನ ಠಾಕೂರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಮೂಟ್ ಕೋರ್ಟ್ ಸ್ಪರ್ಧೆಯ ವಿಜೇತರು ಮತ್ತು ಅತ್ಯುತ್ತಮ ಕಾನೂನು ಸಂಶೋಧಕರನ್ನು ಗೌರವಿಸಲಾಯಿತು. ಪುದುಚೆರಿಯ ಡಾ. ಅಂಬೇಡ್ಕರ್ ಸರ್ಕಾರಿ ಕಾನೂನು ಕಾಲೇಜು ನಡೆಸಿದ್ದ ಈ ಸ್ಪರ್ಧೆಯಲ್ಲಿ ಕರ್ನಾಟಕದ ಮೈಸೂರಿನ ಜೆ.ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಅಮೂಲ್ಯ ಎನ್ ಪ್ರಸಾದ್- 8ನೇ ಸೆಮ್ B.A.LLB ನಿಕಿತಾ ಸುಸಾನ್ ಈಪೆನ್- 8ನೇ ಸೆಮ್ B.A.LLB ಹಾಗೂ ರೋಹನ್ ವಿ ಗಂಗಾಡ್ಕರ್- 6ನೇ ಸೆಮ್ B.A.LLB ವಿಜೇತರಾಗಿದ್ದರು. ಇದರ ಜೊತೆಗೆ ರೋಹನ್ ವಿ ಗಂಗಾಡ್ಕರ್ ಅತ್ಯುತ್ತಮ ಕಾನೂನು ಸಂಶೋಧಕ ಗೌರವಕ್ಕೆ ಪಾತ್ರರಾಗಿದ್ದರು.
ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, ಭಾರತ್ ಹರಂಸ್ ಲಾಲ್ ಖೇರಾ ಅಡ್ಡಲ್, ಕಾರ್ಯದರ್ಶಿ, DCOA, ಶಾಂತಮನು ಸಹಾಯಕ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ, MOCA, F&PD, ನಿಧಿ ಖರೆ OSD, DOCA, ರೋಹಿತ್ ಕುಮಾರ್ ಸಿಂಗ್ ಕಾರ್ಯದರ್ಶಿ, DOCA ಮತ್ತು ಅನುಪ್ ಮಿಶ್ರಾ ಜಂಟಿ ಕಾರ್ಯದರ್ಶಿ, DCOA ಸನ್ಮಾನಿಸಿ ಗೌರವಿಸಿದರು.
Key words: All India Moot Court- Competition-Congratulations – winning -students – Mysore.