ಬೆಂಗಳೂರು,ಜುಲೈ,9,2022(www.justkannada.in): ಅಮರನಾಥದಲ್ಲಿ ಮೇಘಸ್ಪೋಟದಿಂದಾಗಿ 16 ಮಂದಿ ಮೃತಪಟ್ಟಿದ್ದಾರೆ. ಈ ಮಧ್ಯೆ ಅಮರನಾಥದಲ್ಲಿ ಸಿಲುಕಿದ್ದ ಎಲ್ಲಾ ಕನ್ನಡಿಗರೂ ಸೇಫ್ ಆಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲಾ ಕನ್ನಡಿಗರು ಸುರಕ್ಷಿತರಾಗಿದ್ದಾರೆ. ಹೆಲ್ಪ್ ಲೈನ್ ಗೆ 15ರಿಂದ 20ಮಂದಿ ಕರೆ ಮಾಡಿದ್ದಾರೆ. ಅಮರನಾಥದಲ್ಲಿ ಸಿಲುಕಿರುವವರು ಕರೆ ಮಾಡಿದ್ದಾರೆ. ಕನ್ನಡಿಗರನ್ನ ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗಿದೆ ಇನ್ನು ಕೆಲವೆಡೆ 3ರಿಂದ 4 ದಿನ ಮಳೆಯಾಗುವ ಸಾಧ್ಯತೆ ಇದೆ. ಅದಕ್ಕೆ ಅನುಗುಣವಾಗಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಮಳೆ ಹಾನಿ ಬಗ್ಗೆ ಸಭೆ ನಡೆಸಿದ್ದೇನೆ. ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ ಎಂದರು.
Key words: All- Kannadigas -safe – Amarnath-CM- Bommai