ಬೆಂಗಳೂರು,ಫೆಬ್ರವರಿ,19,2021(www.justkannada.in): ಹೋರಾಟ ಮಾಡಿದವರಿಗೆಲ್ಲಾ ಮೀಸಲಾತಿ ಸಿಗಲ್ಲ. ಯಾರು ಅರ್ಹರಿರುತ್ತಾರೋ ಅವರಿಗೆ ಮೀಸಲಾತಿ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಮೀಸಲಾತಿ ಹೋರಾಟ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಯಾವ ಸಮುದಾಯಕ್ಕೆ ಅನ್ಯಾಯವಾಗಿದೆ ಆ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುತ್ತೇವೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಈ ಬಗ್ಗೆ ವರದಿ ನೀಡುತ್ತಾರೆ. ಎಲ್ಲಾ ಸ್ಥಿತಿಗತಿಗಳನ್ನ ಪರಿಶೀಲಸಿ ವರದಿ ನೀಡುತ್ತಾರೆ. ಇನ್ನೊಬ್ಬರಿಗೆ ತೊಂದರೆ ಕೊಟ್ಟು ಮೀಸಲಾತಿ ನೀಡುವುದಿಲ್ಲ ಎಂದರು.

ಹಾಗೆಯೇ ಹೋರಾಟ ಮಾಡಿದವರಿಗೆಲ್ಲ ಮೀಸಲಾತಿ ಸಿಗುವುದಿಲ್ಲ. ಯಾರು ಅರ್ಹರಿರುತ್ತಾರೋ ಅವರಿಗೆ ಮೀಸಲಾತಿ ಸಿಗಲಿದೆ ಎಂದರು.
Key words: All those- fought -not reservation-Minister -KS Eshwarappa.