ಮೈಸೂರು,ನವೆಂಬರ್,25,2022(www.justkannada.in): ಗ್ರಾ.ಪಂಗಳ 2021-22 ಸಾಲಿನ ಆಡಿಟ್ ಅನ್ನು AG ಆಡಿಟ್ ಮಾಡಿಸುವ ಮೂಲಕ ಅಕ್ರಮದಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಲುವಂತೆ ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಸಾಮಾಜಿಕ ಕಾರ್ಯಕರ್ತ ಎಂ. ರವೀಂದ್ರ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಎಂ.ರವೀಂದ್ರ, ಮೈಸೂರು ತಾಲೂಕಿನ ಹಲವು ಗ್ರಾಮ ಪಂಚಾಯತಿಗಳ ಅಧಿಕಾರಿಗಳು, “ಲೋಕಲ್ ಆಡಿಟ್ ಸರ್ಕಲ್ ನ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ಭ್ರಷ್ಟಾಚಾರ ನಡೆಸಿ, ಲಂಚ ನೀಡಿ, ತಮ್ಮ ಗ್ರಾಮ ಪಂಚಾಯತಿಯ ಲೆಕ್ಕಪತ್ರ/ ಬಿಲ್ ಗಳಲ್ಲಿ ಇರಬಹುದಾದ ನ್ಯೂನತೆಗಳನ್ನು ಸರಿಪಡಿಸಿಕೊಂಡು ಅಕ್ರಮ ಎಸಗಿರುವುದು, ಮತ್ತು ಆ ಪ್ರಕಾರವಾಗಿ ಬಳಸಲ್ಪಟ್ಟ ಅನುದಾನವು ಕ್ರಮಬದ್ಧವಾಗಿದೆ ಎಂಬ ರೀತಿಯಲ್ಲಿ ಆಡಿಟ್ ವರದಿ ತರಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಅಲ್ಲದೆ ಮೈಸೂರಿನ ಲೋಕಲ್ ಆಡಿಟ್ ಸರ್ಕಲ್ ನಲ್ಲಿ ಯಾವುದೇ CA ಪದವಿ ಪಡೆಯದ ಅಧಿಕಾರಿಗಳು, ಆಡಿಟ್ ನಡೆಸಿರುವುದು ಸಹ ನನ್ನ ಗಮನಕ್ಕೆ ಬಂದಿದೆ.
ಹೀಗಾಗಿ ಮೈಸೂರು ತಾಲ್ಲೂಕು ವ್ಯಾಪ್ತಿಯ ಗೋಪಾಲಪುರ ಗ್ರಾಮ ಪಂಚಾಯತಿ, ಇಲವಾಲ ಗ್ರಾಮ ಪಂಚಾಯಿತಿ, ಬೀರಿಹುಂಡಿ ಗ್ರಾಮ ಪಂಚಾಯತಿ ಮತ್ತು ಧನಗಳ್ಳಿ ಗ್ರಾಮ ಪಂಚಾಯಿತಿಗಳ 2021-22 ನೇ ಸಾಲಿನ ಆಡಿಟ್ ಅನ್ನು ಆಡಿಟರ್ ಜನರಲ್ ರವರ ಕಚೇರಿಯಿಂದ ಮಾಡಿಸಿ, ವರದಿ ತರಿಸುವುದರೊಂದಿಗೆ ಅಕ್ರಮದಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ POCA ಅಡಿಯಲ್ಲಿ ದೂರು ದಾಖಲಿಸಿ, ಶಿಸ್ತಕ್ರಮ ಜರುಗಿಸಲು ಕ್ರಮವಹಿಸಬೇಕೆಂದು, ಹಾಗೂ ದುರ್ಬಳಕೆ ಆಗಿರುವ ಸಾರ್ವಜನಿಕ ಹಣಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
Key words: Allegation –illegal- AG -audit –gramapanchayath-social activitist- Ravindra –Mysore ZP CEO