ಬೆಂಗಳೂರು,ಫೆಬ್ರವರಿ,15,2023(www.justkannada.in): ರಾಜ್ಯ ಸರ್ಕಾರ ಟೆಂಡರ್ ನಲ್ಲಿ ಗೋಲ್ಮಾಲ್ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಇವರ ಆತ್ಮಸಾಕ್ಷಿಯನ್ನ ಇವರೇ ಪ್ರಶ್ನೆ ಮಾಡಿಕೊಳ್ಳಬೇಕು. ಈ ಭ್ರಷ್ಟಾಚಾರದ ಬಗ್ಗೆ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ರೀತಿ. ಈ ಪರ್ಸೆಂಟೇಜ್ ಕಥೆ ಎಲ್ಲರಿಗೂ ಗೊತ್ತು. ದಾಖಲೆ ಇಡಿ ಅಂದ್ರೆ ಕಾಂಗ್ರೆಸ್ ನವರು ಏನ್ ದಾಖಲೆ ಇಡ್ತಾರೆ. ಈ ಹಿಂದೆ ಬಿಜೆಪಿ ವಿರುದ್ಧ ನಾನು ದಾಖಲೆ ತಂದಿಟ್ಟೆ. ನನ್ನ ದಾಖಲೆಯಿಂದ ಕಾಂಗ್ರೆಸ್ ನವರು ಅನುಕೂಲ ಮಾಡಿಕೊಂಡರು. ಭ್ರಷ್ಟಾಚಾರದಲ್ಲಿ ಎರಡೂ ಪಕ್ಷ ಒಬ್ಬರಿಗಿಂತ ಒಬ್ಬರು ಹೆಚ್ಚು ಎಂದು ಕಿಡಿಕಾರಿದರು.
Key words: Allegation – tender-fraud-HD Kumaraswamy -BJP – Congress.