ಮೈಸೂರು,ಜೂ,10,2020(www.justkannada.in): ಮೈಮುಲ್ನಲ್ಲಿ ಅಕ್ರಮ ನೇಮಕಾತಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ 25 ಸಿಬ್ಬಂದಿ ನೇಮಕಾತಿಗೆ ಹೈಕೋರ್ಟ್ ತಡೆ ನೀಡಿದೆ. ನ್ಯಾಯಾಲಯದ ತಡೆಯಾಜ್ಞೆಯಿಂದ ನಮ್ಮ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್, ಮೈಮುಲ್ನಲ್ಲಿ ಅಕ್ರಮ ನೇಮಕಾತಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ 25 ಸಿಬ್ಬಂದಿ ನೇಮಕಾತಿಗೆ ನಿನ್ನೆಯಷ್ಟೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆ ಮೂಲಕ ಮೈಮುಲ್ ನೇಮಕಾತಿ ಪ್ರಕ್ರಿಯೆಗೆ ತಡೆ ಸಿಕ್ಕಂತಾಗಿದೆ. ಇದು ಇಷ್ಟಕ್ಕೆ ನಿಲ್ಲಬಾರದು ಇದರ ಹಿಂದಿರುವವರು ಹೊರಬರಬೇಕು. ಅಕ್ರಮ ನೇಮಕಾತಿಗೆ ಮುಂದಾಗಿದ್ದ ಅಧಿಕಾರಿಗಳ ವಿರುದ್ದ ತನಿಖೆ ಆಗಬೇಕು. ಇದರ ಮೇಲೂ ಸಂದರ್ಶನ ಕರೆದರೆ ಆಗ ಹೋರಾಟ ಅನಿವಾರ್ಯವಾಗುತ್ತದೆ. ಇದೆ 29ಕ್ಕೆ ತುರ್ತು ನೋಟೀಸ್ ನೀಡುವಂತೆ ಕೋರ್ಟ್ ಹೇಳಿದೆ. ಆ ನಂತರ ಇಡೀ ಪ್ರಕ್ರಿಯೆ ಸ್ಥಗಿತವಾಗಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಎಸ್ ಎಲ್ ಎಲ್ ಸಿ ಪರೀಕ್ಷೆ ವಿಚಾರ: ಬೆಂಬಲಿಸಿದ ಸಾ.ರಾ ಮಹೇಶ್…
ರಾಜ್ಯದಲ್ಲಿ ಎಸ್ ಎಲ್ ಎಲ್ ಸಿ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಸಾ.ರಾ ಮಹೇಶ್, ಕೊವೀಡ್ ಸಂಧರ್ಭದಲ್ಲಿ ರಾಜಕೀಯ ಮಾಡದೇ ಸರ್ಕಾರದ ನಿರ್ಧಾರಗಳಿಗೆ ನಾವು ಬೆಂಬಲಿಸಬೇಕು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅನುಭವ ಇರುವ ರಾಜಕಾರಣಿ. ಈಗಾಗಲೇ ಈ ಬಗ್ಗೆ ಅವರು ತಜ್ಞರಿಂದ ಪರೀಕ್ಷೆ ನಡೆಸುವ ಬಗ್ಗೆ ಮಾಹಿತಿ ಪಡೆದಿರುತ್ತಾರೆ. 10 ನೇ ತರಗತಿ ಪರೀಕ್ಷೆ ನಡೆದಲ್ಲಿ ಸಾರಾ ಬಳಗದಿಂದ ಮೈಸೂರಿನ ಮಕ್ಕಳಿಗೆ ಎನ್. ೯೫ ಮಾಸ್ಕ್ ವಿತರಿಸುತ್ತೇವೆ ಎಂದು ಹೇಳಿದರು.
Key words: Allegations – illegal- recruitment – Mymul-high court-stay-sa.ra Mahesh.