ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ: ಲಂಚದ ರೇಟ್ ಕಾರ್ಡ್ ಬಿಡುಗಡೆ ಮಾಡಿದ ಕಾಂಗ್ರೆಸ್​.

ಬೆಂಗಳೂರು,ಸೆಪ್ಟಂಬರ್,13,2022(www.justkannada.in):  ರಾಜ್ಯ ಬಿಜೆಪಿ ಸರ್ಕಾರದ ವಿರು‍ದ್ಧ 40 ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರ ಆರೋಪ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಇದೀಗ ಬಿಜೆಪಿ ಲಂಚದ ರೇಟ್ ಕಾರ್ಡ್ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್​ನಿಂದ ವಿಭಿನ್ನ ರೀತಿಯಾಗಿ ಭ್ರಷ್ಟಾಚಾರ ಅಭಿಯಾನಕ್ಕೆ ಪ್ಲ್ಯಾನ್​ ಮಾಡುತ್ತಿದ್ದು,  ಅಭಿಯಾನದ ಭಾಗವಾಗಿ ಸದ್ಯ ಕಾಂಗ್ರೆಸ್​ನಿಂದ ಬಿಜೆಪಿ ಲಂಚ ರೇಟ್ ಕಾರ್ಡ್ ಬಿಡುಗಡೆ ಮಾಡಿದೆ.

ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಡಬಲ್‌ ಇಂಜಿನ್ ಸರ್ಕಾರ ಬಂದ ಮೇಲೆ ಬೊಮ್ಮಾಯಿ ಸರ್ಕಾರ ರೇಟ್ ಕಾರ್ಡ್ ಹಾಕಿ, ಯಾವು ಯಾವುದಕ್ಕೆ ಎಷ್ಟೆಷ್ಟು ರೇಟ್ ಅಂತ ಫಿಕ್ಸ್​ ಮಾಡಲಾಗಿದೆ. ಎಲ್ಲ ಹುದ್ದೆಗೂ ಒಂದೊಂದು ರೇಟ್ ಫಿಕ್ಸ್ ಆಗಿಬಿಟ್ಟಿದೆ ಎಂದು ಆರೋಪಿಸಿದ್ದಾರೆ.

ಕೋವಿಡ್ ಕಿಟ್ ಪೂರೈಕೆ -75%, ಪಿಡಬ್ಲ್ಯೂಡಿ ಒಪ್ಪಂದ -40%, ಮಠಕ್ಕೆ ಅನುದಾನ -40%, ಉಪಕರಣಗಳ ಪೂರೈಕೆ – 40%, ಮೊಟ್ಟೆ ಪೂರೈಕೆ -30% ಭ್ರಷ್ಟಾಚಾರ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Key words: Alleged-corruption-Congress -released -rate card