ಮೈಸೂರು, ಜೂನ್ 07, 2020 (www.justkannada.in): ಮೈಸೂರಿನಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಸಾರಾ ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರ ಆರೋಪಕ್ಕೆ ಒಬ್ಬ ಅಧಿಕಾರಿಯ ವರ್ಗಾವಣೆ ಮಾಡ್ತಾರೆ. ಆದ್ರೆ ಲಂಚ ಪಡೆದು ಎಸಿಬಿ ಬಲೆ ಬಿದ್ದರು ಮತ್ತೊಬ್ಬ ಅಧಿಕಾರಿಯ ವರ್ಗಾವಣೆಯೂ ಇಲ್ಲ ಸಸ್ಪೆಂಡ್ ಕೂಡ ಆಗಿಲ್ಲ. ಇದೇಲ್ಲ ಉಸ್ತುವಾರಿ ಸಚಿವರು ಗೊತ್ತಿದ್ದೆ ನಡೆದಿದ್ಯಾ ? ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಮೈಸೂರು ಉಸ್ತುವಾರಿ ಸಚಿವರ ಕಾಲೇಳೆದರು.
ಮೈಸೂರಿನಲ್ಲಿ ವರ್ಗಾವಣೆ ದಂದೆ ನಡೆಯುತ್ತಿದೆ. ಇವರು ವರ್ಗಾವಣೆ ಮಾಡಿದ್ದ ಅಧಿಕಾರಿಯನ್ನ ಕೆಎಟಿ ವಾಪಸ್ ನಿಯೋಜಿಸಿದೆ. ಅವಧಿಗಿಂತ ಮುಂಚೆ ವರ್ಗಾವಣೆ ಆಗಿದ್ದಕ್ಕೆ ಅಬಕಾರಿ ಎಸ್ಪಿರನ್ನ ವಾಪಸ್ ಮೈಸೂರಿಗೆ ನಿಯೋಜಿಸಿದೆ. ಭ್ರಷ್ಟಾಚಾರದ ಆರೋಪ ನಿಜವಾಗಿದ್ದರೆ ಅಧಿಕಾರಿಯನ್ನ ಸಸ್ಪೆಂಡ್ ಮಾಡಿ. ವರ್ಗಾವಣೆಯಿಂದ ಏನು ಪ್ರಯೋಜನ ಇದೆ ಎಂದು ಹೇಳಿದರು.
ಹಾಗಾದ್ರೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿ ವಿರುದ್ದ ಕ್ರಮ ಯಾಕೀಲ್ಲ. ಈ ರೀತಿಯ ತಾರತಮ್ಯ ನೀತಿ ಯಾಕೇ?ವರ್ಗಾವಣೆ ವಿಚಾರಗಳು ಉಸ್ತುವಾರಿ ಸಚಿವರಿಗೆ ಗೊತ್ತಿದೆ ಅಂದ್ರೆ ಏನ್ ಮಾಡೋಕೆ ಆಗುತ್ತೆ ಎಂದು ಮೈಸೂರಿನಲ್ಲಿ ಶಾಸಕ ಸಾ.ರಾ.ಮಹೇಶ್ ಹೇಳಿದರು.
ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ಬೆಂಬಲ: ಮಂಡ್ಯ ಮೈಶುಗರ್ ಕಾರ್ಖಾನೆ ಖಾಸಗೀಕರಣ ವಿಚಾರಕ್ಕೆ ನನ್ನ ಬೆಂಬಲ ಇದೆ. ಸಹಕಾರಿ ಕ್ಷೇತ್ರದ ಖಾಸಗೀಕರಣಕ್ಕೆ ನನ್ನ ಬೆಂಬಲ ಇದೆ. ಸಕ್ಕರೆ ಕಾರ್ಖಾನೆಗಳನ್ನ ಖಾಸಗೀಕರಣ ಮಾಡೋದು ಒಳ್ಳೆಯದು. ಇದರಿಂದ ರೈತರು ಉಳಿಯುತ್ತಾರೆ,ಸಹಕಾರ ಕ್ಷೇತ್ರಕ್ಕೆ ಹಣ ಬರುತ್ತೆ. ಧೀರ್ಘಕಾಲದ ಟೆಂಡರ್ ಕರೆದು ಕಾರ್ಖಾನೆ ಗುತ್ತಿಗೆ ನೀಡಲು. ಮೈಸೂರಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಖಾಸಗೀಕರಣಕ್ಕೆ ನಾನೇ ಹೋರಾಟ ಮಾಡಿದ್ದೆ. ಆದ್ರೆ ಗುತ್ತಿಗೆ ಪಡೆಯುವ ಕಂಪನಿಗಳ ಪೂರ್ವಪರ ವಿಚಾರಿಸಬೇಕು. ಹಳೆ ಕಾರ್ಖಾನೆಯಲ್ಲಿ ರೈತರನ್ನ ಹೇಗೆ ನಡೆಸಿಕೊಂಡಿದೆ ಅನ್ನೋದನ್ನ ಪರಿಶೀಲನೆ ಮಾಡಬೇಕು. ಮುರುಗೇಶ್ ನಿರಾಣಿ ರಾಜಕಾರಣಿ ಜೊತೆ ಉದ್ಯಮಿ ಕೂಡ ಹೌದು. ಅವರಿಗೆ ಮೈಶುಗರ್ ಕಾರ್ಖಾನೆ ಗುತ್ತಿಗೆ ನೀಡೋಕೆ ನನ್ನ ಅಭ್ಯಂತರ ಇಲ್ಲ ಎಂದು ಹೇಳಿದರು.