ಎಲ್ಲಾ ಪಟಾಕಿಗಳು ಹಸಿರು ಪಟಾಕಿಗಳೇ: ದಯವಿಟ್ಟು ಖರೀದಿಸಿ : ಪಟಾಕಿ ಮಾರಾಟಗಾರರ ಮನವಿ

ಮೈಸೂರು,ನವೆಂಬರ್,12,2020(www.justkannada.in) :  ಈಗಿರುವ ಎಲ್ಲಾ ಪಟಾಕಿಗಳು ಹಸಿರು ಪಟಾಕಿಗಳೇ. ಈ ಬಗ್ಗೆ ಯಾವುದೇ ಗೊಂದಲಬೇಡ. ಪಟಾಕಿ ಖರೀದಿಗೆ, ಸರ್ಕಾರದ ಈ‌ ಹೇಳಿಕೆಯಿಂದ ಜನರೇ ಬರುತ್ತಿಲ್ಲ. ದಯವಿಟ್ಟು ಪಟಾಕಿ ಖರೀದಿಸಲು ಮುಂದೆ ಬನ್ನಿ ಎಂದು ಪಟಾಕಿ ಮಾರಾಟಗಾರರು ಮನವಿ ಮಾಡಿದರು.kannada-journalist-media-fourth-estate-under-lossಗುರುವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೆಬ್ಬಾಳು ಕೈಗಾರಿಕಾ ಪ್ರದೇಶ ಪಟಾಕಿ ವರ್ತಕರ ಸಂಘದ ಸದಸ್ಯರು ಮಾತನಾಡಿ, ಸರ್ಕಾರದ ಆದೇಶದಿಂದ ನಮ್ಮ ಮೇಲೆ ದೊಡ್ಡ ಪರಿಣಾಮವೇ ಬೀರಿದೆ. ಪಟಾಕಿ‌ ಖರೀದಿಸಲು ಗ್ರಾಹಕರು ಬರುತ್ತಿಲ್ಲ. ಮೈಸೂರು,ಚಾಮರಾಜನಗರ, ಮಂಡ್ಯ ಸೇರಿದಂತೆ ಇತರೆ ಕಡೆಯಿಂದ ಗ್ರಾಹಕರು ಬರುತ್ತಿದ್ದರು. ಆದರೆ, ಈ ಬಾರಿ ಯಾರು ಪಟಾಕಿ ಖರೀದಿಗೆ ಆಗಮಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಪಟಾಕಿ ಮಾಲಿನ್ಯಕ್ಕಿಂತಲೂ ವಾಹನ ಮತ್ತು ಕೈಗಾರಿಕೆಗಳ ಮಾಲಿನ್ಯವೇ ಹೆಚ್ಚು

೨೦೧೮ ಮತ್ತು ೨೦೧೯ ನೇ ಸಾಲಿನ‌ಲ್ಲಿ ತಯಾರಾಗಿರುವ ಪಟಾಕಿಗಳು ಹಸಿರು ಪಟಾಕಿಗಳೇ ಆಗಿವೆ. ನಾವು ಕೂಡ ೨೦ ರಿಂದ ೩೦ ಲಕ್ಷದವರೆಗೂ ಬಂಡವಾಳ ಹಾಕಿ ಪಟಾಕಿ ಖರೀದಿಸಿದ್ದೇವೆ. ಪಟಾಕಿಯಿಂದ ವಾತಾವರಣ ಕಲುಶಿತವಾಗುತ್ತಿದೆ ಎಂಬ ಆರೋಪ ಹಿನ್ನೆಲೆ. ಪಟಾಕಿ ಬಳಕೆಯಿಂದ ಉಂಟಾಗುವ ಮಾಲಿನ್ಯಕ್ಕಿಂತಲೂ ವಾಹನ ಮತ್ತು ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯವೇ ಹೆಚ್ಚು ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ಹೇಳಿದರು.

ನ್ಯಾಯಾಲಯದ ಆದೇಶ ಮತ್ತು ಸಲಹೆ ಮೇರೆಗೆ ಪಟಾಕಿ ತಯಾರಿಸಲಾಗಿದೆ

೨೦೧೭ ರಲ್ಲಿ ಸುಪ್ರೀಂ ಕೋರ್ಟ್ ಹಸಿರು ಪಟಾಕಿ ತಯಾರಿಕೆ ಮಾಡಿ ಮಾರಾಟ ಮಾಡುವಂತೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶ ಮತ್ತು ಸಲಹೆ ಮೇರೆಗೆ ಪಟಾಕಿ ತಯಾರಕರು NEERI ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಒಪ್ಪಂದದ ಮೇರೆಗೆ ಪಟಾಕಿ ತಯಾರಿಕೆಗೆ ಬಳಸುವ ಸ್ಪೋಟಕಗಳನ್ನು ಮಿತ ಪ್ರಮಾಣದಲ್ಲಿ ಬಳಸಿ ತಯಾರಿಸಲಾಗುತ್ತಿದೆ.  ದೊಡ್ಡ ಕಂಪನಿಗಳು ಮಾತ್ರ ಹಸಿರು ಪಟಾಕಿ ಚಿನ್ಹೆ ಬಳಸಿ ಪಟಾಕಿ ತಯಾರಿಸಿ ಮಾರಾಟ ಮಾಡುತ್ತಿವೆ. ಆದರೆ,, ಕೆಲವು ಗುಡಿ‌ಕೈಗಾರಿಕೆಗಳು ಮಾತ್ರ ಚಿನ್ಹೆ ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಬಾರಿ ಶೇ.೯೫ ರಷ್ಟು ಹಸಿರು ಪಟಾಕಿಗಳನ್ನೇ ಮಾರಾಟ ಮಾಡುತ್ತಿದ್ದೇವೆ

ಕೆಲವು ಪಟಾಕಿ ಬಾಕ್ಸ್ ಗಳಲ್ಲಿ ಹಸಿರು ಪಟಾಕಿ ಚಿನ್ಹೆ ಮುದ್ರಣವಾಗಿಲ್ಲ. ಹಾಗೆಂದ ಮಾತ್ರಕ್ಕೆ ಅದು ಹಸಿರು ಪಟಾಕಿ ಅಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಬಾರಿ ಶೇ.೯೫ ರಷ್ಟು ಹಸಿರು ಪಟಾಕಿಗಳನ್ನೇ ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.All-existing-fireworks-green-fireworks-Please-buy-fireworks-Request-Fireworks-Dealer

key words  : All-existing-fireworks-green-fireworks-Please-buy-fireworks-Request-Fireworks-Dealer