ಬೆಂಗಳೂರು,ಮೇ 20,2019(www.justkannada.in): ಲೋಕಸಭೆ ಚುನಾವಣೆ ಫಲಿತಾಂಶದ ಬಳೀಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಮೈತ್ರಿ ಪಕ್ಷಗಳ ಅತಿರಥ ಮಹಾರಥ ನಾಯಕರು ಸೋತು ಮನೆಗೆ ಹೋಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ –ಜೆಡಿಎಸ್ ಗೆ ಹತಾಶೆ ಭಾವನೆ ಇದೆ. ಡಿಸಿಎಂ ಪರಮೇಶ್ವರ್ ಹತಾಶಾ ಮನೋಭಾವದಿಂದ ಹೇಳಿಕೆ ನೀಡುತ್ತಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಬಂದಿವೆ. ನಿರೀಕ್ಷೆಗೂ ಹೆಚ್ಚು ಜನಬೆಂಬಲ ಪ್ರಧಾನಿ ಮೋದಿಗೆ ಸಿಕ್ಕಿದೆ. ದೇಶದ ಜನರು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರಲು ಕಾತುರರಾಗಿದ್ದಾರೆ. 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಗೆಯೇ ಕಾಂಗ್ರೆಸ್-ಜೆಡಿಎಸ್ ನಾಯಕರು ಕಚ್ಚಾಡುತ್ತಿದ್ದಾರೆ. 23ರಂದು ಫಲಿತಂಶ ಬಂದ ಬಳಿಕ ಏನಾಗಬಹುದು ಎಂಬುದನ್ನ ಕಾದು ನೋಡಬೇಕು ಎಂದು ಬಿಎಸ್ ಯಡಿಯೂರಪ್ಪ ನುಡಿದರು.
Key words: Alliance party leaders go out home after election results- bs yeddyurappa
#election #politicalnews #bsyddyuarappa #banagalore