ಬೆಂಗಳೂರು,ಮೇ, 23,2019(www.justkannada.in): ಲೋಕಸಭೆ ಚುನಾವಣಾ ಫಲಿತಾಂಶ ಪ್ರಧಾನಿ ಮೋದಿ ನೇತೃತ್ವದ ಎನ್.ಡಿಎ ಸರಳ ಬಹುಮತದತ್ತ ಸಾಗಿದ್ದು ಕಾಂಗ್ರೆಸ್ ನೆಲಕಚ್ಚಿದೆ.
ರಾಜ್ಯದಲ್ಲಿ ಬಿಜೆಪಿ 23 ಕಾಂಗ್ರೆಸ್ 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ವಿರುದ್ಧ ಏಕಾಂಗಿ ಸೆಣಸಾಡುವ ಬದಲು ಮೈತ್ರಿಪಕ್ಷ ಜೆಡಿಎಸ್ ಜತೆ ಕೈಜೋಡಿಸಿದ ಕಾಂಗ್ರೆಸ್ ದೊಡ್ಡ ಬೆಲೆ ತೆತ್ತಿದೆ. ಮೈತ್ರಿಧರ್ಮ ಪಾಲಿಸಲು ಸಿಎಂ ಹುದ್ದೆ ಬಿಟ್ಟುಕೊಟ್ಟ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದೆ. ಸ್ವತಂತ್ರವಾಗಿ ಚುನಾವಣೆ ಎದುರಿಸುವ ಬದಲು ಜಾತ್ಯತೀತ ಶಕ್ತಿಯ ಹೆಸರಿನಲ್ಲಿ ಬಿಜೆಪಿ ವಿರುದ್ಧ ಸೆಣಸಾಡಸಲು ಜೆಡಿಎಸ್ ಬೆಂಬಲ ಪಡೆದಿತ್ತು. ಆದರೆ, ಹಳೆಯ ಮೈಸೂರು ಪ್ರಾಂತ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ತ್ರಾಸವಾಗಿದೆ.
ವಿಶೇಷವಾಗಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಉತ್ತರದಲ್ಲಿ ಏನು ವರ್ಕೌಟ್ ಆಗಿಲ್ಲ. ಕರಾವಳಿ ಪ್ರದೇಶದಲ್ಲಿ ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟ ಕಾಂಗ್ರೆಸ್ ಹೀನಾಯ ಮುಖಭಂಗಕ್ಕೆ ಒಳಗಾಗಿದೆ. ಏಕೆಂದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಗೆ ಬಿಟ್ಟುಕೊಟ್ಟ ಕಾಂಗ್ರೆಸ್ ದೊಡ್ಡ ಪೆಟ್ಟು ತಿಂದರೆ, ಉತ್ತರ ಕನ್ನಡ ಕ್ಷೇತ್ರದಲ್ಲಿ ಜೆಡಿಎಸ್ ಗೆ ಬಿಟ್ಟಿತ್ತು. ಇಲ್ಲಿ ಅನಂತಕುಮಾರ್ ಹೆಗಡೆ ವಿರುದ್ಧ ದೊಡ್ಡ ಅಂತರದ ಸೋಲು ಕಂಡು ನೆಲಕಚ್ಚಿದೆ.
Alliance with JDS: congress Defeat to Congress
Key words: #election2019 #Congress #loses #JDS