ಬೆಂಗಳೂರು,ಮೇ,30,2020(www.justkannada.in): 1.20 ಲಕ್ಷ ನಿವೇಶನಗಳನ್ನು ಬಡವರಿಗೆ ಹಂಚಲು ಕ್ರಮ ಕೈಗೊಳ್ಳಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಈ ಕುರಿತು ಪ್ರಕ್ರಿಯೆ ಆರಂಭವಾಗಲಿದೆ. ಬಡವರಿಗೆ ಉಚಿತ ನಿವೇಶನ ಜೊತೆಗೆ ಮೂಲಭೂತ ಸೌಕರ್ಯ ಒದಗಿಸುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ವಿ.ಸೋಮಣ್ಣ,ರಾಜ್ಯದಲ್ಲಿ ರೇರಾ ಪ್ರಾಧಿಕಾರ ರಚಿಸಲಾಗಿದೆ. ಅಪಾರ್ಟ್ಮೆಂಟ್ ಗಳ ನಿರ್ಮಾಣ ಮತ್ತು ಖರೀದಿ ನಡುವೆ ಪ್ರಾಧಿಕಾರ ಸಂಪರ್ಕ ಸೇತುವೆಯಾಗಲಿದೆ. ಅಪಾರ್ಟ್ಮೆಂಟ್ ಖರೀದಿ ವ್ಯವಹಾರ ಕಾನೂನು ಚೌಕಟ್ಟಿನಲ್ಲಿ ತರ್ತೇವೆ. 4 ಸಾವಿರ ರಿಯಲ್ ಎಸ್ಟೇಟ್ ಏಜೆಂಟ್ ಗಳನ್ನು ನೋಂದಣಿ ಮಾಡಿಸಲಾಗಿದೆ. ರಾಜ್ಯದಲ್ಲಿ ಹಲವು ಅಪಾರ್ಟ್ಮೆಂಟ್ ಮಾಲೀಕರು ನಿಯಮ ಪಾಲಿಸ್ತಿಲ್ಲ. ರೇರಾ ಪ್ರಾಧಿಕಾರವು ಅಪಾರ್ಟ್ಮೆಂಟ್ ಖರೀದಿ, ನಿರ್ಮಾಣ ಸಂಬಂಧ ದೂರುಗಳನ್ನು ಪರಿಶೀಲಿಸಲಿದೆ. ಎಲ್ಲವೂ ರೇರಾ ಕಾಯ್ದೆಯಡಿಯೇ ಕ್ರಮ ತಗೋತೇವೆ ಎಂದು ಹೇಳಿದರು.
120 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ
ಸೂರ್ಯನಗರ 4 ನೇ ಹಂತದಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲಾಗುವುದು. ಇಲ್ಲಿ 30 ಸಾವಿರ ನಿವೇಶನಗಳ ಹಂಚಿಕೆ ಮಾಡ್ತೇವೆ. ಇಲ್ಲಿ 100 ಎಕರೆ ಜಾಗದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡುತ್ತೇವೆ. 120 ಅಡಿ ಎತ್ತರದ ವಿವೇಕಾನಂದರ ಪ್ರತಿಮೆ ಇದಾಗಿರಲಿದೆ. ಗುಜರಾತ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ರ ಮಾದರಿಯಲ್ಲಿ ವಿವೇಕಾನಂದರ ಪ್ರತಿಮೆ ನಿರ್ಮಿಸ್ತೇವೆ ಎಂದು ಸಚಿವ ಸೋಮಣ್ಣ ತಿಳಿಸಿದರು.
Key words: allocate 1.20 lakh –house-poor-minister- V. Somanna