ಬೆಂಗಳೂರು ಬೆಂಗಳೂರು,ಜನವರಿ,21,2021(www.justkannada.in): ನೂತನ 7 ಮಂದಿ ಸಚಿವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆಗೆ ಮಾಡಿದ್ದು, ಜತೆಗೆ ಹಲವು ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನೇತೃತ್ವದ ಸಂಪುಟ ವಿಸ್ತರಣೆಯಲ್ಲಿ 7 ಶಾಸಕರು ನೂತನ ಸಚಿವರಾಗಿ ಸಂಪುಟ ಸೇರಿದ್ದಾರೆ. ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿದ್ದಾರೆ.
ಇನ್ನು ಹಾಲಿ ಇರುವ ಕನಿಷ್ಠ 10 ಖಾತೆಗಳು ಅದಲುಬದಲಾಗಿದ್ದು, ಸಿಎಂ ಬಿಎಸ್ ವೈ ಈಗಾಗಲೇ ಖಾತೆ ಪಟ್ಟಿಯನ್ನ ರಾಜಭವನಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ
ಯಾವ ಸಚಿವರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿ ಇಲ್ಲಿದೆ
ಬಸವರಾಜ ಬೊಮ್ಮಾಯಿ- ಗೃಹ, ಕಾನೂನು, ಸಂಸದೀಯ ವ್ಯವಹಾರ
ಜೆ.ಸಿ. ಮಾಧುಸ್ವಾಮಿ -ವೈದ್ಯಕೀಯ ಶಿಕ್ಷಣ, ಕನ್ನಡ-ಸಂಸ್ಕೃತಿ ಇಲಾಖೆ
ಸಿ.ಸಿ. ಪಾಟೀಲ್-ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ
ಎಸ್ ಅಂಗಾರ- ಮೀನುಗಾರಿಕೆ, ಬಂದರು
ಕೋಟಾ ಶ್ರೀನಿವಾಸ ಪೂಜಾರಿ-ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ
ಉಮೇಶ್ ಕತ್ತಿ -ಆಹಾರ, ನಾಗರಿಕ ಪೂರೈಕೆ ಇಲಾಖೆ
ಅರವಿಂದ ಲಿಂಬಾವಳಿ-ಅರಣ್ಯ
ಮುರುಗೇಶ್ ನಿರಾಣಿ- ಗಣಿ, ಭೂ ವಿಜ್ಞಾನ
ಎಂಟಿಬಿ ನಾಗರಾಜ್- ಅಬಕಾರಿ
ಡಾ.ಕೆ. ಸುಧಾಕರ್-ಆರೋಗ್ಯ
ಆನಂದ್ ಸಿಂಗ್ -ಪ್ರವಾಸೋದ್ಯಮ, ಪರಿಸರ ಇಲಾಖೆ
ಸಿ.ಪಿ. ಯೋಗೇಶ್ವರ್ -ಸಣ್ಣ ನೀರಾವರಿ
ಆರ್. ಶಂಕರ್-ಪೌರಾಡಳಿ ಹಾಗೂ ರೇಷ್ಮೆ ಇಲಾಖೆ
ಗೋಪಾಲಯ್ಯ-ತೋಟಗಾರಿಕೆ, ಸಕ್ಕರೆ
ಕೆ.ಸಿ. ನಾರಾಯಣ ಗೌಡ- ಯುವ ಸಬಲೀಕರಣ, ಕ್ರೀಡೆ, ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ ಎನ್ನಲಾಗುತ್ತಿದೆ.
Key words: Allocation department-New Minister-Many minister- changes- cm bs yeddyurappa