ಮೈಸೂರು,ಫೆಬ್ರವರಿ,10,2023(www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಮಾಜದ ವಿವಿಧ ವಲಯಗಳಲ್ಲಿ ವಿಶಿಷ್ಟ ಸಾಧನೆಗೈದಿರುವ ಸಾಧಕರಿಗೆ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್ ಹೇಳಿದರು.
ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಯಶಸ್ವಿನಿ ಸೋಮಶೇಖರ್, ಇಪ್ಪತ್ತು ವರ್ಷಗಳ ಬಳಿಕ ಮುಡಾದಿಂದ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ದೇವನೂರು ಬಡಾವಣೆಯ 3ನೇ ಹಂತದಲ್ಲಿ ಒಟ್ಟು 188 ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಕರ್ನಾಟಕದ ನಿವಾಸಿಗಳಾಗಿರುವ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮಾನ್ಯತೆ ಪಡೆದಿರುವವರಿಗೆ 5% ಮೀಸಲು, ಕಲೆ ವಿಜ್ಞಾನ ಸಾಹಿತ್ಯ ವೈದ್ಯಕೀಯ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಅಂತರರಾಷ್ಟ್ರೀಯ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮಾನ್ಯತೆ ಪಡೆದಿರುವವರಿಗೆ 5% ಮೀಸಲಿಡಲಾಗಿದೆ.
ಹಾಗೆಯೇ ಕರ್ನಾಟಕದ ನಿವಾಸಿಗಳಾಗಿರುವ ಮಾಜಿ ಸೈನಿಕರು ಹಾಗು ಸಿಬ್ಬಂದಿಗಳಿಗೆ 2% ಮೀಸಲು, 10 ವರ್ಷಗಳ ಅವಧಿಗೆ ಕಡಿಮೆ ಇಲ್ಲದಂತೆ ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ವಾಸವಾಗಿರುವ ಸ್ವಾತಂತ್ರ್ಯ ಯೋಧರಿಗೆ 2%, ಕರ್ತವ್ಯ ನಿರತರಾಗಿದ್ದಾಗ ನಿಧನ ಹೊಂದಿದ ರಾಜ್ಯ ಸರ್ಕಾರಿ ನೌಕರರ ಅವಲಂಬಿತರಿಗೆ 1% ಮೀಸಲು ಇಡಲಾಗಿದೆ ಎಂದು ಮಾಹಿತಿ ನೀಡಿದ ಯಶಸ್ವಿನಿ ಸೋಮಶೇಖರ್ ನೀಡಿದರು.
Key words: Allotment –site- achievers- Muda -President -Yashasvini Somashekhar.