ಬೆಂಗಳೂರು,ಮಾರ್ಚ್,19,2021(www.justkannada.in): ಕೊರೊನಾ ಸೋಂಕು ಮತ್ತೆ ಹೆಚ್ಚಳ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಮುಂದಾಗಿರುವ ಬಿಬಿಎಂಪಿ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ನಿರ್ಧಾರಕ್ಕೆ ಇದೀಗ ಚಿತ್ರರಂಗ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಭರ್ತಿಗೆ ಅವಕಾಶ ಕೊಡಿ. ಥಿಯೇಟರ್ ಗಳಿಗೆ ಮಾತ್ರ 50% ನಿಯಮ ಯಾಕೆ…? ಚಿತ್ರರಂಗ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಒಂದು ಬಾರಿಯ ಕೊರೊನಾ ಲಾಕ್ ಡೌನ್ ನಿಂದಾಗಿ ಇಡೀ ಸಿನಿರಂಗವೇ ಬಂದ್ ಆಗಿತ್ತು. ಈಗಷ್ಟೇ ಮತ್ತೆ ಕೆಲಸಗಳು ಆರಂಭವಾಗುತ್ತಿವೆ. ಹೀಗಿರುವಾಗ ಈಗ ಥಿಯೇಟರ್ ಗಳಿಗೆ ಶೇ.50ರಷ್ಟು ಅವಕಾಶ ನೀಡಿದರೆ ಸಿನಿಮಾದವರ ಬದುಕು ದುಸ್ಥರವಾಗುತ್ತದೆ. ಇಂಥಹ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ನಟ ಪುನೀತ್ ರಾಹ್ ಕುಮಾರ್ ಒತ್ತಾಯಿಸಿದ್ದಾರೆ.
ಥಿಯೇಟರ್ ಗಳಲ್ಲಿ ಶೇ. 100ರಷ್ಟು ಭರ್ತಿಗೆ ಅವಕಾಶ ನೀಡಿ. ಅಭಿಮಾನಿಗಳು, ಪ್ರೇಕ್ಷಕರು ಕೋವಿಡ್ ನಿಯಮಗಳನ್ನು ಪಾಲಿಸಿ, ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಥಿಯೇಟರ್ ಗೆ ಬರಲಿ. ರಾಜಕೀಯ ರ್ಯಾಲಿ, ಸಭೆ-ಸಮಾರಂಭಗಳನ್ನೂ ಬಂದ್ ಮಾಡಲಿ. ಸರ್ಕಾರದ ಈ ನಿರ್ಧಾರದಿಂದ ಇಡೀ ಸಿನಿಮಾ ಕ್ಷೇತ್ರಕ್ಕೆ ತೊಂದರೆಯಾಗುತ್ತದೆ. ಸರ್ಕಾರ ಈ ನಿಯಮ ವಾಪಸ್ ಪಡೆಯಬೇಕು ಎಂದು ಹೇಳಿದ್ದಾರೆ.
Key words: Allow -100% -filling – theatres-Actor- Power Star- Puneeth Rajkumar -demands.