ಬೆಂಗಳೂರು, ಜುಲೈ 16, 2023 (www.justkannada.in): ಇನ್ನು ಮುಂದೆ ಸಿವಿಲ್ ಪೊಲೀಸ್ ಠಾಣೆಗಳಲ್ಲಿಯೂ ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ದೂರು ನೀಡಬಹುದಾಗಿದೆ.
ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಅವರು ಆದೇಶ ಹೊರಡಿಸಿದ್ದಾರೆ.
ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇನ್ಮುಂದೆ ಈ ಕುರಿತ ಸೈಬರ್ ಅಪರಾಧಗಳ ದೂರುಗಳನ್ನು ನಾಗರಿಗ ಪೊಲೀಸ್ ಠಾಣೆಗಳಲ್ಲೂ ನೀಡಬಹುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ತಿಳಿಸಿದ್ದಾರೆ.
ಈ ಮೊದಲು ಡಿಸಿಪಿ ಮತ್ತು ಎಸ್ ಪಿ ಮಟ್ಟದಲ್ಲಿ ತೆರೆಯಲಾಗಿದ್ದ ಸೈಬರ್, ಆರ್ಥಿಕ, ನಾರ್ಕೋಟಿಕ್ ಠಾಣೆಗಳಲ್ಲಿ ಅಷ್ಟೇ ದೂರು ದಾಖಲಿಸಲು ಅವಕಾಶ ಇತ್ತು.
2022ನೇ ಸಾಲಿನಲ್ಲಿ ರಾಜ್ಯದಲ್ಲಿ 12,548 ಸೈಬರ್ ಪರಾಧಗಳು ದಾಖಲಾಗಿದ್ದಾವೆ. ಇದರಲ್ಲಿ ಬೆಂಗಳೂರು ನಗರದಲ್ಲೇ ಅತೀ ಹೆಚ್ಚು ಸೈಬರ್ ಕ್ರೈಂ ಎಫ್ಐಆರ್ ಗಳು ದಾಖಲಾಗಿವೆ.