ಜ.12 ರಂದು ಮೈಸೂರಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ಮೈಸೂರು, ಜನವರಿ,10,2025 (www.justkannada.in):  ಜನವರಿ 12 ರಂದು ಅಮರಶಿಲ್ಪಿ ಜಕಣಾಚಾರಿ ಅವರ ನಾಲ್ಕನೇ ವರ್ಷದ ಸಂಸ್ಮರಣಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ಅಮರಶಿಲ್ಪಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮಹೇಶ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದ ಮಹೇಶ್ ಅವರು, ಮೈಸೂರಿನ ವಾರ್ಡ್ ನಂಬರ್ 1 ಲಕ್ಷ್ಮಿಕಾಂತ ನಗರದ ಅಮರಶಿಲ್ಪಿ ಜಕಣಾಚಾರಿ ವೃತ್ತದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜ.12ರ  ಭಾನುವಾರದಂದು ಸಂಜೆ 4ಗಂಟೆಗೆ  ನಡೆಯುವ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಕೆ ಪಿ ನಂಜುಂಡಿ, ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್, ಹಾಗೂ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.  ಕಾರ್ಯಕ್ರಮದಲ್ಲಿ ರಾಮಲಲ್ಲಾ ಮೂರ್ತಿಯ ಖ್ಯಾತ ಶಿಲ್ಪಿ ಡಾ. ಅರುಣ್ ಯೋಗಿರಾಜ್  ಅವರು ಸೇರಿದಂತೆ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಮಾಜದ ಬಂಧುಗಳು  ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಅಮರಶಿಲ್ಪಿ ವೇದಿಕೆಯ ಅಧ್ಯಕ್ಷ ಕೆಂಪರಾಜು, ಮಹಿಳಾ ಉಪಾಧ್ಯಕ್ಷೆ ಕೆಎನ್ ಶಾಂತಮ್ಮ,  ಸಹಕಾರಿ ಅಧ್ಯಕ್ಷ ಜಗದೀಶ್ ಚಾರ್,  ಉಪಾಧ್ಯಕ್ಷ ಎನ್ ಸ್ವಾಮಿ , ಮಹಿಳಾ ಕಾರ್ಯದರ್ಶಿ ಎಚ್ಎಸ್ ಸವಿತಾ ಶಾಸ್ತ್ರಿ, ಖಜಾಂಚಿ ಬಸವರಾಜ್  ಗೌರವ ಸಲಹೆಗಾರರಾದ ನಾಗರಾಜ  ಹಿರಿಯ ನಿರ್ದೇಶಕರಾದ ಈಶ್ವರ ಚಾರ್  ಎಂ. ಮಂಜು ಉಪಸ್ಥಿತರಿದ್ದರು.

Key words: Amarashilpi Jakanachari, Commemoration Day, Mysore