ನವದೆಹಲಿ:ಜುಲೈ-30:(www.justkannada.in) ಅತಿದೊಡ್ಡ ಇ-ಮಾರುಕಟ್ಟೆ ಅಮೇಜಾನ್.ಕಾಮ್ ಶೀದ್ಘ್ರದಲ್ಲಿಯೇ ಭಾರತದಲ್ಲಿ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ.
ಅಮೆಜಾನ್ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದು, ಈ ಕುರಿತು ಸ್ಥಳೀಯ ಘಟಕಗಳನ್ನು ಖರೀದಿಸಲು ಮಾತುಕತೆ ನಡೆಸಲಾಗಿತ್ತಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಅಮೆಜಾನ್ ಸ್ಥಳೀಯ ಪಾಲುದಾರ ಕ್ಯಾಟಮಾರನ್ ಅವರೊಂದಿಗೆ ಈಗಾಗಲೇ ಈ ಕುರಿತು ಮಾತುಕತೆ ನಡೆಸಿದ್ದು, ಹೊಸ ಸೇವೆ ಆರಂಭಕ್ಕಾಗಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದೆ. ಭಾರತದಲ್ಲಿ ಸೆಪ್ಟಂಬರ್ ತಿಂಗಳಿಂದ ಹಬ್ಬಗಳು ಆರಂಭವಾಗುತ್ತಿದ್ದು, ಅದಕ್ಕೂ ಮುಂಚಿತವಾಗಿಯೇ ಫುಡ್ ಡೆಲಿವರಿ ಸೇವೆಯನ್ನು ಪ್ರಾರಂಭಿಸುವ ಗುರಿ ಹೊಂದಿದೆ.
ಜೂನ್ ತಿಂಗಳಿನಲ್ಲಿ ಅಮೇಜಾನ್ ಯುನೈಟೆಡ್ ಸ್ಟೇಟ್ ನಲ್ಲಿ ತನ್ನ ಆಹಾರ ವಿತರಣಾ ಸೇವೆಯನ್ನು ಸ್ಥಗಿತಗೊಳಿಸಿತ್ತು. ಕಾರಣ ಉಬರ್ ಈಟ್ಸ್ ಸೇರಿದಂತೆ ಹಲವಾರು ಇ-ಫುಡ್ ಡೆಲೆವರಿ ಸರ್ವೀಸ್ ಗಳ ಸ್ಪರ್ಧೆಯಿಂದಾಗಿ ತನ್ನ ಸೇವೆ ಸ್ಥಗಿತಗೊಳಿಸಿತ್ತು. ಆದರೀಗ ಭಾರತದಲ್ಲಿ ಈ ಸೇವೆ ಆರಂಭಿಸಲು ಮುಂದಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಅಮೆಜಾನ್ ನಿರಾಕರಿಸಿದೆ.