ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಕ್ಕೆ ಕಾಯಂ ಬೋಧಕರ ನೇಮಕ : ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ

ಮೈಸೂರು,ಫೆಬ್ರವರಿ,23,2021(www.justkannada.in) : ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಕಾಯಂ ಬೋಧಕರು ಹಾಗೂ ಬೋಧಕೇತರರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಯಿತು.jkಮಂಗಳವಾರ ಮೈಸೂರು ವಿವಿ ವ್ಯಾಪ್ತಿಯ ಚಾಮರಾಜನಗರದ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಸಿಂಡಿಕೇಟ್ ಸಭೆ ನಡೆಸಲಾಯಿತು.

ಸಭೆಯಲ್ಲಿ ಪ್ರಮುಖವಾಗಿ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಕಾಯಂ ಬೋಧಕರು ಇನ್ನೂ ನೇಮಕವಾಗದ ವಿಷಯ ಕುರಿತಂತೆ ಚರ್ಚಿಸಲಾಯಿತು. ಜೊತೆಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ಮೈಸೂರಿನ 9 ಸ್ವಾಯತ್ತತೆ ಇರುವ ಕಾಲೇಜು ಮುಂದುವರಿಯಲು ಅನುಮತಿ ನೀಡಲಾಯಿತು.

ಸರಕಾರಕ್ಕೆ ನಿಯಾಮವಳಿ ರೂಪಿಸಿ ಅನುಮತಿ ನೀಡುವಂತೆ ಮನವಿ

ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಸುಸಜ್ಜಿತವಾದ ಕಟ್ಟಡ, ಸೌಲಭ್ಯಗಳು ಇವೆ. ಆದರೆ, ಕಾಯಂ ಬೋಧಕರು ಇಲ್ಲದ ಕಾರಣ ಸರಕಾರಕ್ಕೆ ನಿಯಾಮವಳಿ ರೂಪಿಸಿ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ.

ಸಭೆ ಕುರಿತು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಹಿಂದುಳಿದ ಜಿಲ್ಲೆಯಾದ ಚಾಮನಗರದಲ್ಲಿ ಉತ್ತಮ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ನೇಮಕಾತಿ ನಡೆಯಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

 

Ambedkar,Postgraduate,Center,Permanent,Appointment,nstructors,Mysore VV,Syndicate,Meeting 

ಸದ್ಯ ಕೇಂದ್ರದಲ್ಲಿ ಶೇ.80ರಷ್ಟು ವಿದ್ಯಾರ್ಥಿನಿಯರೆ ಇದ್ದಾರೆ. ಶೇ.20ರಷ್ಟು ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರಿಗೆ ಕಾಯಂ ಬೋಧಕರು ನೇಮಕವಾದರೆ ಭವಿಷ್ಯದಲ್ಲಿ ಅನುಕೂಲವಾಗಲಿದೆ.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಜ್ಞಾನಪ್ರಕಾಶ್, ಸಿಂಡಿಕೇಟ್ ಸದಸ್ಯರಾದ ಪ್ರದೀಪ್ ದೀಕ್ಷಿತ್, ದಾಮೋದರ್, ಚೈತ್ರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

key words : Ambedkar-Postgraduate-Center-Permanent-Appointment-nstructors-Mysore VV-Syndicate-Meeting