ಕೊಡಗು,ಏಪ್ರಿಲ್,11,2025 (www.justkannada.in): ತಿಮಿಂಗಿಲ ವಾಂತಿಯನ್ನು (ಅಂಬಗ್ರಿಸ್) ಮಾರಲು ಯತ್ನಿಸುತ್ತಿದ್ದ ಹತ್ತು ಆರೋಪಿಗಳನ್ನು ಕೊಡಗು ಪೋಲಿಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಶಂಶುದ್ದೀನ್.ಎಸ್.( 45), ಎಂ.ನವಾಜ್, (54), ವಿ.ಕೆ.ಲತೀಶ್ (53), ವರ್ಷ, ಜೇಶ್.ವಿ, (40). ಪ್ರಶಾಂತ್.ಟಿ,( 52), ರಾಘವೇಂದ್ರ,ಎ.ವಿ.( 48), ಬಾಲಚಂದ್ರನಾಯಕ್, (55), ಜೋಬಿಸ್.ಕೆ.ಕೆ. (33), ವರ್ಷ ಬಂಧಿತ ಅರೋಪಿಗಳು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮದಲ್ಲಿ ವಿರಾಜಪೇಟೆ ಪೊಲೀಸರು 10 ಆರೋಪಿಗಳನ್ನ ಬಂಧಿಸಿದ್ದಾರೆ.
ಆರೋಪಿಗಳು ಕೇರಳದ ತಿರುವನಂತಪುರಂನಿಂದ ಅಂಧ್ರದಲ್ಲಿ ಅಥವಾ ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ. ಬಂಧಿತರಿಂದ 10 ಕೋಟಿ ರೂ ಮೌಲ್ಯದ 10 ಕೆ.ಜಿ 390 ಗ್ರಾಂ ಅಂಬರ್‌ಗ್ರೀಸ್ (ತಿಮಿಂಗಲದ ವಾಂತಿ) ಮತ್ತು ನೋಟು ಎಣಿಸುವ ಯಂತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Key words: sell, ambergris, Ten accused, arrested