ರಾಯಚೂರು,ಡಿಸೆಂಬರ್,4,2020(www.justkannada.in): ನಿಂತಿದ್ಧ ಲಾರಿಗೆ ಆಂಬ್ಯುಲೆನ್ಸ್ ಡಿಕ್ಕಿಯಾಗಿ ಸ್ಟಾಫ್ ನರ್ಸ್ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಸ್ಟಾಪ್ ನರ್ಸ್ ಸಂಗಮೇಶ್ (30) ಮೃತಪಟ್ಟವರು. ಚಾಲಕ ಹನುಮಪ್ಪನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದೆ. ಲಿಂಗಸುಗೂರು ತಾಲೂಕಿನ ಪಾಮನಕಲ್ಲೂರಿನಿಂದ ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ಗರ್ಭಿಣಿಯನ್ನು ಆಂಬ್ಯುಲೆನ್ಸ್ ನಲ್ಲಿ ಕರೆತರಬೇಕಿತ್ತು. ಆಂಬ್ಯುಲೆನ್ಸ್ ನಲ್ಲಿ ಸ್ಟಾಪ್ ನರ್ಸ್ ಸಂಗಮೇಶ್ (30)ನೊಂದಿಗೆ ಚಾಲಕ ಹನುಮಪ್ಪ ಹೊರಟಿದ್ದು, ಈ ವೇಳೆ ಅಂಬ್ಯಲೆನ್ಸ್ ಲಿಂಗಸಗೂರಿನ ಸರ್ಜಾಪುರ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಗುರುವಾರ ರಾತ್ರಿ 11 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಸಂಗಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭತ್ತ ತುಂಬಿದ ಲಾರಿಯನ್ನು ಇಂಡಿಕೇಟರ್ ಹಾಕದೆಯೇ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಅವಸರದಲ್ಲಿ ಹೊರಟಿದ್ದ ಅಂಬ್ಯುಲೆನ್ಸ್ ಲಾರಿ ಕಾಣಿಸದ ಹಿನ್ನೆಲೆಯಲ್ಲಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
Key words: Ambulance-collides – truck-Death – Staff Nurse- on the spot.