ಬೆಂಗಳೂರು,ಫೆಬ್ರವರಿ,28,2021(www.justkannada.in) : ನಾನು ಕಾಂಗ್ರೆಸ್ ಗೆ ಸೇರಿ ನಾಲ್ಕು ದಿನ ಆಗಿದೆ, ನಾಲ್ಕು ದಿನಗಳಿಂದ ನಾನು ಕಾಂಗ್ರೆಸ್ ನಲ್ಲಿದ್ದೇನೆ ಎನ್ನುವುದನ್ನು ಎಂಜಾಯ್ ಮಾಡುತ್ತಿದ್ದೇನೆ. ಸದ್ಯ ವೈರಲ್ ಆಗಿರುವ ಆಡಿಯೋ ಈಗಿನದ್ದಲ್ಲ. ನಾನು ಮೊದಲು ಜೆಡಿಎಸ್ ನಲ್ಲಿದ್ದಾಗಿನ ಆಡಿಯೋ ಎಂದೆನಿಸುತ್ತಿದೆ ಎಂದು ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿದರು.
ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ಅವರು, ನಾನು ಯಾವುದೇ ಶರತ್ತುಗಳಿಲ್ಲದೆ ಕಾಂಗ್ರೆಸ್ ಸೇರಿದ್ದೇನೆ. ಪುಲಿಕೇಶಿನಗರದಲ್ಲಿ ಯಾರಾದರೂ ಅಭ್ಯರ್ಥಿಯಾಗಲಿ. ನನಗೆ ಅವಕಾಶ ಕೊಟ್ಟರೆ ನಾನು ಕ್ಯಾಂಡಿಡೇಟ್ ಆಗುತ್ತೇನೆ. ಯಾರೇ ಆದರೂ ಓಕೆ ಎಂದಿದ್ದಾರೆ.
ನಾನು ಟಿಕೆಟ್ ಬಗ್ಗೆ ಆಸಕ್ತಿ ಹೊಂದಿಲ್ಲ. ಟಿಕೆಟ್ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು, ನಾನು ಸೇರಿದಾಗಿನಿಂದ ಏನೂ ಮಾತಾಡಿಲ್ಲ ನಾನು ಪರಮೇಶ್ವರ್ ಬರಲಿ ನಮ್ಮ ಕ್ಷೇತ್ರಕ್ಕೆ ಅಂತ ಹೇಳಿದೀನಿ ಎಂದರು.
ಕ್ಷೇತ್ರದಲ್ಲಿ ಏನೇನಾಗುತ್ತಿದೆ ಅಂತ ವಿಚಾರ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಬಹಳಷ್ಟು ಬೇಸರವಿದೆ. ಕಾಂಗ್ರೆಸ್ ಗಿಂತ ಶಾಸಕರ ಮೇಲೆ ಬಹಳ ಬೇಸರವಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ನಂತರ ಶಾಸಕರ ಮೇಲೆ ಕ್ಷೇತ್ರದಲ್ಲಿ ಬೇಸರವಿದೆ. ಮುಸ್ಲಿಂ ಸಮುದಾಯದವರು ಅಖಂಡ ಬಗ್ಗೆ ಬೇಸರ ಹೊಂದಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಶಾಸಕರಾಗಿ ಅವರ ಕೆಲಸ ಮಾಡಲಿ ಎಂದು ಪ್ರಸನ್ನ ಕುಮಾರ್ ಟೀಕಿಸಿದ್ದಾರೆ.
key words : am-Congress-That-Enjoy-I’m doing-Former MLA-Prasanna Kumar