ಬೆಂಗಳೂರು,ನವೆಂಬರ್,25,2022(www.justkannada.in): ರಾಜ್ಯದಲ್ಲಿ 9 ಮತ್ತು 10ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣದ ಮುಂದುವರೆದ ಶಿಕ್ಷಣ ಎಂದು ನಿಯಮಕ್ಕೆ ತಿದ್ದುಪಡಿ ತಂದು ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಶಿಕ್ಷಣ ಸಂಸ್ಥೆಗಳ, (ವರ್ಗೀಕರಣ, ನಿಯಂತ್ರಣ, ಪಠ್ಯಕ್ರಮ ಮತ್ತು ಇತರೆ ) ನಿಯಮ-1995 ತಿದ್ದುಪಡಿ ನಿಯಮ-2022ರಲ್ಲಿ ಈ ನಿಯಮದ ಅನ್ವಯ ನೋಂದಣಿ ಮತ್ತು ಮಾನ್ಯತೆಗೆ ಮಾತ್ರ 9 ಮತ್ತು 10ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣದ ಮುಂದುವರೆದ ಶಿಕ್ಷಣ ಎಂದು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.
ಆದ್ದರಿಂದ ಇನ್ನು ಮುಂದೆ ಈಗಾಗಲೇ 01 ರಿಂದ 08 ಅಥವಾ 6 ರಿಂದ 8 ನಡೆಯುತ್ತಿರುವ ಶಾಲಾ ಆವರಣದಲ್ಲಿ 9 ಮತ್ತು 10ನೇ ತರಗತಿಯನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ಮುಂದುವರೆದ ಶಾಲೆ ಎಂದು ಪರಿಗಣಿಸತಕ್ಕದ್ದು. ಹಾಗೂ ಅದರ ಅನ್ವಯ ನೋಂದಣಿ ನಿಯಮಗಳ ಅನುಸಾರ ಕ್ರಮವಹಿಸತಕ್ಕದ್ದು.
ಹಾಗೆಯೇ ಇಂತಹ ಶಾಲೆಗಳು ಮಾನ್ಯತೆ, ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿಯೂ ಸಹಾ ಮುಂದುವರೆದ ಶಾಲೆ ಎಂದು ಪರಿಣಿಸತಕ್ಕದ್ದು. ಇಂತಹ ಶಾಲೆಗಳಿಗೆ ಭದ್ರತಾ ಠೇವಣಿಯನ್ನು ನಿರ್ಧರಿಸುವ ಸಂದರ್ಭದಲ್ಲಿ ಮುಂದುವರೆದ ಶಾಲೆಗೆ ನಿಗಧಿಪಡಿಸಲಾಗಿದೆಯೋ ಅದೇ ಮೊತ್ತವನ್ನು ಮುಂದುವರೆಸುವುದು. ಯಾವುದೇ ಕಾರಣಕ್ಕೂ ಈ ಉಲ್ಲೇಖದ ಅಧಿಸೂಚನೆ ಹೊರಡಿಸಿದ ನಂತರ 9 ಮತ್ತು 10ನೇ ತರಗತಿಯನ್ನು ಹೊಸ ಶಾಲೆ ಎಂದು ಪರಿಗಣಿಸತಕ್ಕದ್ದಲ್ಲ.
ಒಂದು ವೇಳೆ ಬೇರೆ ಆವರಣದಲ್ಲಿ 9 ಮತ್ತು 10ನೇ ತರಗತಿಗಳನ್ನು ಪ್ರತ್ಯೇಕವಾಗಿ ಪ್ರಾರಂಭಿಸಿದ್ದಲ್ಲಿ ಅಂತಹ ಶಾಲೆಯನ್ನು ಮಾತ್ರ ಪ್ರೌಢ ಶಾಲೆಯೆಂದು ಪರಿಗಣಿಸತಕ್ಕದ್ದು. ಈ ಬಗ್ಗೆ ತಮ್ಮ ಕಛೇರಿ ವ್ಯಾಪ್ತಿಯ ಎಲ್ಲಾ ಅಧೀನ ಕಛೇರಿಗಳಿಗೆ ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರ ಗಮನಕ್ಕೆ ತರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
Key words: Amendment – class 9 and 10 -further education-Order – Govt.