ಮೈಸೂರು, ನ.05,2024: (www.justkannada.in news) ಅಪ್ಪಟ ಕನ್ನಡತಿ, ವಿದೇಶದಲ್ಲಿ ನೆಲೆಸಿದ್ದರೂ ಸ್ವಚ್ಚ ಕನ್ನಡ, ಬಟ್ಟಲು ಗಣ್ಣಿನ ಬೆಡಗಿ, ಇವರ ಬಿಂಕು ಬಿನ್ನಾಣಕೆ ವಿಶ್ವದ ದೊಡ್ಡಣ್ಣ ಅಮೇರಿಕಾದ ಜನರೇ ಫಿದಾ. ಅಷ್ಟಕ್ಕೂ ಈಕೆ ಯಾರು ಅಂತೀರಾ..? ಈ ಸ್ಟೋರಿ ನೋಡಿ..
ವಿದೇಶಿ ರ್ಯಾಂಪ್ ಮೇಲೆ ಕ್ಯಾಟ್ ವಾಕ್. ಪಿಂಕ್ ಡ್ರೆಸ್ ಹಾಕಿ ಪಿಳಿ ಪಿಳಿ ಕಣ್ಣೋಟ ಬೀರುತ್ತಿರುವ ಸಿಂಗಾರಿ. ಅಪ್ಪ,ಅಮ್ಮನ ಮುದ್ದು ಮಗಳು ಈಕೆ. ಇವಳ ಸಾಧನೆ ಕೇಳಿದ್ರೆ ಕನ್ನಡಿಗರಿಗೆಲ್ಲಾ ಪ್ರೌಡ್ ಫೀಲಿಂಗ್.
ಈಕೆ, ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಭೆ. ಮೈಸೂರಿನ ಗೋಕುಲಂ ನಿವಾಸಿ. ಬಾಲ್ಯದಿಂದಲೂ ಮಾಡೆಲ್ಲಿಂಗ್ ಗೀಳು ಬೆಳೆಸಿಕೊಂಡ ಈ ಸುಂದರಿ ಓದಿದ್ದು ಬೆಳೆದಿದ್ದು ಮೈಸೂರು, ಬೆಂಗಳೂರಿನಲ್ಲಿ. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾದ ಕ್ಯಾಲಿಫೋರ್ನಿಯಾಕ್ಕೆ ಹಾರಿದ ಪೋರಿ ಈಗ ಅಲ್ಲೇ ವೃತ್ತಿಯ ಜೊತೆಗೆ ಸೂಪರ್ ಮಾಡೆಲ್. ಈಕೆ ಹೆಸರು ನಯನ ವಿಶ್ವ . ಮೈಸೂರಿನಿಂದ ದೂರದ ಅಮೇರಿಕಾಗೆ ಹೋಗಿ ಸೂಪರ್ ಮಾಡೆಲ್ ಸಾಧನೆಗೈದ ಸಾಧಕಿ.
ಅಮೇರಿಕಾದ ನಿಯತಕಾಲಿಕೆಗಳಲ್ಲೂ ಇವಳದ್ದೇ ಸದ್ದು.
ದೊಡ್ಡ ದೊಡ್ಡ ಮಾಡೆಲ್ ಶೋಗಳು,ಅಮೇರಿಕಾದ ಜಾಹಿರಾತುಗಳಲ್ಲೂ ಕಾಣಿಸಿಕೊಂಡು ಉದಯೋನ್ಮುಖ ತಾರೆಯಾಗಿ ಬೆಳೆಯುತ್ತಿರು ಬೆಡಗಿ ನಯನ.
ಕನ್ನಡ ನಾಡು ನುಡಿ ಬಗ್ಗೆ ಭಾರಿ ಅಭಿಮಾನ
ಅಮೇರಿಕಾದಲ್ಲಿ ಕಾಂತಾರ ಸಿನಿಮಾ ನೋಡಿ ಖುಷಿ ಪಟ್ಟರಂತೆ ನಯನ. ಮಾಯಾ ಲೋಕ ಮಾಡೆಲಿಂಗ್ ಅನುಭವ ಹಂಚಿಕೊಂಡು ಸಂತಸಗೊಂಡರು.
ಇತ್ತ ಇವರ ತಂದೆ ತಾಯಿ ಇಬ್ಬರು ಬ್ಯಾಂಕ್ ಉದ್ಯೋಗಿಗಳು. ಆರಂಭದಲ್ಲಿ ಮೈಸೂರಿನಲ್ಲೇ ವಿದ್ಯಾಭ್ಯಾಸ ಕೊಡಿಸಿ ಮಗಳ ಆಸೆ ಗುರಿಗಳಿಗೆ ಅಡ್ಡಿಯಾಗದೆ ಅವಳ ಆಸೆಯಂತೆ ಪ್ರೋತ್ಸಾಹ ನೀಡಿದ್ರು.ಬಾಲ್ಯದಿಂದಲೂ ಬಹಳ ಪ್ರತಿಭಾವಂತೆ ಎಲ್ಲದರಲ್ಲೂ ಟಾಪರ್ ಆಗಿಯೇ ಬಂದಳು. ಈಗಲೂ ಅದೇ ರೀತಿ ದೂರದ ಅಮೇರಿಕಾದಲ್ಲಿ ಮಾಡೆಲಿಂಗ್ ಮಾಡಿಕೊಂಡು ಜತೆಗೆ ಇಂಜಿನಿಯರಿಂಗ್ ವೃತ್ತಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು, ಬಿಡುವಿನ ವೇಳೆ ಮಾಡೆಲ್ ಶೋಗಳಿಗೆ ಹೋಗಿ ಈಗ ಅಮೇರಿಕದ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ,ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.
ಅವಳ ಪ್ರತಿಭೆ ಬಗ್ಗೆ ಸುದ್ದಿ ನೋಡಿ ನಮಗೆ ಬಹಳ ಸಂತೋಷವಾಗಿದೆ ಎನ್ನುತ್ತಾರೆ ನಯನ ಪೋಷಕರಾದ ತಂದೆ ವಿಶ್ವ ಚೈತನ್ಯ ಹಾಗೂ ತಾಯಿ ಭವಾನಿ.
ನಮ್ಮ ಮೈಸೂರಿನ ಹುಡುಗಿ, ಅಮೇರಿಕಾದ ಮಾಡೆಲ್ ಲೋಕದಲ್ಲಿ ಮಿಂಚುತ್ತಿರುವುದು ಖುಷಿಯ ವಿಚಾರವೇ ಸರಿ.
- ರಾಜೇಶ್ , ಯಶ್ಟೆಲ್ ಟಿವಿ, ಮೈಸೂರು.
key words: “Mysore girl “, shining in the, worldAmerican fashion