ನವದೆಹಲಿ,ಮಾರ್ಚ್,21,2025 (www.justkannada.in): ದೇಶದಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಟೆರರಿಸಂ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಕೇಂದ್ರಗೃಹ ಸಚಿವ ಅಮಿತ್ ಶಾ, ಹಿಂದ ಸರ್ಕಾರಗಳು ವರ್ತನೆ ಸಡಿಲವಾಗಿತ್ತು. ಕಳೆದ 10 ವರ್ಷದಲ್ಲಿ ದೇಶದ ಭದ್ರತೆ ಬಲಿಷ್ಟಗೊಂಡಿದೆ. ನಾವು ಭಧ್ರತಾ ಪಡೆಗಳ ವಿಶ್ವಾಸ ಹೆಚ್ಚಿಸಿದ್ದೇವೆ. ಗೃಹ ಸಚಿವಾಲಯದಲ್ಲಿ ಅಗತ್ಯ ಬದಲಾವಣೆ ಮಾಡಲಾಗಿದೆ. ನಾವು ಕಾಶ್ಮೀರಿ ಪಂಡಿತರಿಗೆ ಮೀಸಲಾತಿಯನ್ನ ನೀಡಿದ್ದೇವೆ ಎಂದರು.
ನಾವು ನಕ್ಸಲರ ಆರ್ಥಿಕ ಬೆನ್ನೆಲುಬು ಮುರಿದಿದ್ದೇವೆ. ಸೇನೆ ಒಬ್ಬ ನಕ್ಸಲರನ್ನೂ ಬಿಡಲ್ಲ. ದೇಶದಲ್ಲಿ ನಕ್ಸಲಿಸಂ ಕೊನೆಗೊಳಿಸುವುದು ನಮ್ಮ ಉದ್ದೇಶ. 2026 ಮಾರ್ಚ್ 31ರೊಳಗೆ ನಕ್ಸಲಿಸಂ ಕೊನೆಗೊಳ್ಳುತ್ತದೆ ಎಂದು ಕೇಂದ್ರಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
Key words: no place, terrorism, country, Union Home Minister, Amit Shah