ಅಮಿತ್ ಶಾ ಬುಲಾವ್: ಮತ್ತೆ ಶಾಸಕ ಯತ್ನಾಳ್ ಬಣ ದೆಹಲಿಗೆ

ಬೆಂಗಳೂರು,ಮಾರ್ಚ್,9,2025 (www.justkannada.in): ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ತಲೆದೂರಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪುತ್ರ ಬಿವೈ ವಿಜಯೇಂದ್ರ ವಿರುದ್ದ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಸೆಡ್ಡು ಹೊಡೆದಿದೆ. ಏನಾದರೂ ಸರಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನ ಕೆಳಗಿಳಿಸಿ ಬೇರೆಯವರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಯತ್ನಿಸುತ್ತಿದೆ.

ಈ ಮಧ್ಯೆ ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಲಿದೆ. ಹೌದು ಕೇಂದ್ರ ಸಚಿವ ಅಮಿತ್ ಶಾ ಬುಲಾವ್ ಬೆನ್ನ‍ಲ್ಲೆ ಮಂಗಳವಾರ ಶಾಸಕ ಯತ್ನಾಳ್ ಬಣ ದೆಹಲಿಗೆ ಪ್ರಯಾಣ ಬೆಳೆಸಿ ಹೈಕಮಾಂಡ್ ಭೇಟಿಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಅರವಿಂದ ಲಿಂಬಾವಳಿ ಅವರು ಚರ್ಚೆ ನಡೆಸಿದ್ದರು.  ಈ ವೇಳೆ ದೆಹಲಿಗೆ ಬರುವಂತೆ ಅಮಿತ್ ಶಾ ಸೂಚನೆ  ನೀಡಿದ್ದರು ಎನ್ನಲಾಗಿದ್ದು ಮಂಗಳವಾರ ಯತ್ನಾಳ್ ಬಣ ದೆಹಲಿಗೆ ಪ್ರಯಾಣ ಬೆಳೆಸಲಿದೆ.

Key words: Amit Shah, MLA,  Yatnal, returns, Delhi