ಮುಂಬೈ:ಜೂ-11:(www.justkannada.in) ಬಾಲಿವುಡ್ ಹಿರಿಯ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಅಮಿತಾಬ್ ಪ್ರೊಫೈಲ್ ಫೋಟೋ ಜಾಗದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋವನ್ನು ಹಾಕಿದ್ದಾರೆ ಹ್ಯಾಕರ್ಸ್ ಗಳು.
ಅಷ್ಟೇ ಅಲ್ಲ ಅಮಿತಾಬ್ ಅವರ ಬಯೋಡೇಟಾವನ್ನೂ ಬದಲಾಯಿಸಿದ್ದಾರೆ. ಬಯೋಡೇಟಾ ಮೇಲೆ ಲವ್ ಪಾಕಿಸ್ತಾನ್ ಎಂದು ಬರೆಯಲಾಗಿದೆ. ಕವರ್ ಪಿಕ್ ಗೆ ಟರ್ಕಿಷ್ ಹ್ಯಾಕರ್ ಗ್ರೂಪ್ ಅಯ್ಯಿಲ್ದಿಜ್ ತಂಡ ಲೋಗೋ ಹಾಕಲಾಗಿದೆ. ಪಿನ್ ಮಾಡಲಾದ ಟ್ವೀಟ್ನಲ್ಲಿ ಅವರು ಐಸ್ಲ್ಯಾಂಡ್ಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಈ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ.
ಬಿಗ್ ಬಿ ಟ್ವಿಟರ್ ಖಾತೆಯನ್ನು ಯಾರು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲವಾದರೂ, ಇದರ ಹಿಂದೆ ಪಾಕಿಸ್ತಾನ ಬೆಂಬಲಿತ ಹ್ಯಾಕರ್ ಗಳ ಕೈವಾಡದ ಕುರಿತು ಶಂಕೆ ವ್ಯಕ್ತವಾಗಿದೆ.