ಬೆಂಗಳೂರು,ಜನವರಿ,17,2021(www.justkannada.in) : ಅತೃಪ್ತರ ಸ್ಥಾನದ ಬಗ್ಗೆ ನಾನೇನು ಹೇಳಲ್ಲ. ಯಾರಿಗೆ ಹೇಳಬೇಕು ಅವರಿಗೆ ಹೇಳಿದ್ದೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಹಿನ್ನೆಲೆ, ಕೇಂದ್ರ ಸಚಿವ ಅಮಿತ್ ಶಾ ಜತೆ ಸೌಹಾರ್ಯುತ ಭೇಟಿಯಷ್ಟೇ. ಕೊರೊನಾ ಲಸಿಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೆ ನೀಡಲಾಗುವುದು ಎಂದರು.
ಇಂದು ರಾಜ್ಯದಲ್ಲಿ 2ನೇ ದಿನದ ಕೊರೊನಾ ಲಸಿಕೆ ಆರಂಭವಾಗಲಿದೆ. ವೈದ್ಯರು, ನರ್ಸ್ ಉತ್ತಮ ಸೇವೆ ಮಾಡುತ್ತಿದ್ದು, ನೆನ್ನೆ ಔಷಧಿ ಪಡೆದವರು ಆರಾಮಗಿದ್ದಾರೆ ಎಂದು ತಿಳಿಸಿದ್ದಾರೆ.
key words : am-not-talking-about-unhappy-position-Minister- Dr.K.Sudhakar