ಅಮೃತ ಸಿಂಚನ – 48: ಶತ್ರುಗಳ ಪಟ್ಟಿ ಚಿಕ್ಕದಾಗತೊಗಲಿ!

ಮೈಸೂರು,ಜುಲೈ,5,2021(www.justkannada.in):

ನಿಮ್ಮ ಶತ್ರುಗಳು ಯಾರು ಯಾರು ಇದ್ದಾರೆ ಅಂತೊಂದು ಪಟ್ಟಿಯನ್ನು ತಯಾರಿಸಿಕೊಳ್ಳಿ.jk

ಆ ಪಟ್ಟಿಯಲ್ಲಿರುವ ಶತ್ರುಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತಾ ಹೋಗಿ. ಕೊನೆಯಲ್ಲಿ ನಿಮಗೆ ಶತ್ರುಗಳೇ ಇಲ್ಲದಂತಹ ಪರಿಸ್ಥಿತಿ ಪ್ರಾಪ್ತವಾಗಬೇಕು. ಶತ್ರುಗಳ ಪಟ್ಟಿ ಖಾಲಿಯಾಗಬೇಕು.

ಅದು ಹೇಗೆ?

“ಶತ್ರುಗಳನ್ನು ಇಲ್ಲವಾಗಿಸುವುದು”- ಎಂದರೆ, ಶತ್ರುಗಳನ್ನೆಲ್ಲಾ ಹಿಡಿದು ಹಿಡಿದು ಕೊಲ್ಲ ತೊಡಗುವುದಲ್ಲ ಮತ್ತೆ! ಅವರೆಲ್ಲ ನಿಮ್ಮ ಮಿತ್ರರಾಗಿ ಪರಿವರ್ತನೆಗೊಳ್ಳುತ್ತಾ ಹೋಗಬೇಕು ಅಷ್ಟೇ. ಅದಕ್ಕೆ ಏನು ಬೇಕೋ ಅದನ್ನು ಮಾಡಿ.

ಇರುವವರೊಡನೆಲ್ಲಾ ನಿಷ್ಟೂರ ಕಟ್ಟಿಕೊಳ್ಳುತ್ತಾ ಹೋದರೆ, ಶತ್ರುತ್ವ ಬೆಳೆಸಿಕೊಳ್ಳತೊಡಗಿದರೆ ನಮಗೆ ಸಮಯದಲ್ಲಿ ಯಾರೂ ಇಲ್ಲದಂತಹ ಪರಿಸ್ಥಿತಿ ಬಂದೊದಗಬಹುದು. ಸತ್ತ ಮೇಲಾದರೂ ನಾಲ್ಕುಜನ ಬೇಕಾಗುತ್ತದಷ್ಟೇ. ಏಕೆಂದರೆ, ನಮ್ಮ ಹೆಣವನ್ನು ನಾವೇ ಹೊರಲು ಸಾಧ್ಯವಿಲ್ಲವಲ್ಲ!

ಶತ್ರುಗಳನ್ನೆಲ್ಲಾ ಮಿತ್ರರನ್ನಾಗಿ ಮಾಡಿಕೊಳ್ಳುವುದರಲ್ಲೇ ಸುಖ ಜೀವನದ ಮರ್ಮ ಅಡಗಿದೆ!

– ಜಿ. ವಿ. ಗಣೇಶಯ್ಯ.