ಅಮೃತ ಸಿಂಚನ – 33: ಒಳಿತು ಕೆಡಕುಗಳ ಜ್ಞಾನ

ಅಮೃತ ಸಿಂಚನ – 33: ಒಳಿತು ಕೆಡಕುಗಳ ಜ್ಞಾನ

ಮೈಸೂರು,ಮಾರ್ಚ್,29,2021(www.justkannada.in):  ಒಂದು ಕೊಚ್ಚೆಯ ಕೊಳಕು ಹೋಂಡ. ಇನ್ನೊಂದು ತಿಳಿನೀರಿನ ಪವಿತ್ರ ತೀರ್ಥದ ಕೊಳ. ಯಾವುದೋ ಒಂದುರಲ್ಲಿ ಬಿದ್ದು ಸಾಯಲೇಬೇಕು. ಆಯ್ಕೆ ನಿಮ್ಮದು.Government,Social,Economic,Educational,survey,Report,Should,receive,Former CM,Siddaramaiah 

ಸಾಯುವುದಂತೂ ಸಾಯಲೇಬೇಕು. ಆದರೆ, ನೀವು ಯಾವುದರಲ್ಲಿ ಬಿದ್ದು ಸಾಯಲು ಇಚ್ಛಿಸುತ್ತೀರಿ? ತಿಳಿನೀರಿನ ತೀರ್ಥದ ಕೊಳದಲ್ಲಿ ತಾನೆ?

ಆದರೆ ಸತ್ಯ ವಿಚಾರವೊಂದು ಬೇರೆಯದೇ ರೀತಿಯದು ಇಲ್ಲಿದೆ. ತಿಳಿನೀರಿನ ಪವಿತ್ರ ತೀರ್ಥವಿರುವ ಕೊಳದಲ್ಲಿ ಬಿದ್ದು ಸಾಯುವ ಇಚ್ಛೆ ನಿಮಗೆ ಉಂಟಾಗುವುದಕ್ಕೆ ಜನ್ಮಾಂತರದ ಸತ್ಕರ್ಮ ಫಲದ ಬಲವಿರಬೇಕು. ಬಹಳಷ್ಟು ಜನ ಕೊಳಚೆಯಲ್ಲಿ ಬಿದ್ದು ಸಾಯೋದಕ್ಕೇ ಇಷ್ಟಪಡುತ್ತಾರೆ. ಅವರು ಅದನ್ನು ಏಕೆ ಇಷ್ಟ ಪಡುತ್ತಾರೆ ಎಂದು ನೀವು ಅಚ್ಚರಿ ಪಡುತ್ತೀರಿ. ಅದು ಅವರ ಪ್ರಾಪ್ತಿ!

ಹಂದಿಯು ಹೊಲಸಿನಲ್ಲೇ ಇದ್ದು ಹೊಲಸು ತಿನ್ನುತ್ತಿರುತ್ತದೆ. ನಿಮಗದು ಅಸಹ್ಯವೆನಿಸುತ್ತದೆ. ಆದರೆ, ಹಂದಿಗೆ ಹಾಗೆನಿಸುವುದೇ ಇಲ್ಲ. ಆ ಬಗೆಗೆ ನೀವು ಕೇಳಿದರೆ – ಅದು ಮಾತನಾಡುವಂತಿದ್ದರೆ- ಅದು ಹೇಳಬಹುದು, “ಕೊಳಚೆಯ ರುಚಿ ನಿಮಗೇನು ಗೊತ್ತು? ಒಮ್ಮೆ ತಿಂದು ನೋಡಿ. ಆಮೇಲೆ ನಮಗೇ ಕೊಳಚೆ ಇಲ್ಲದ ಹಾಗೆ ಮಾಡುತ್ತೀರಿ” – ಅಂತ

ಒಳ್ಳೆಯದು ಹಾಗೂ ಕೆಟ್ಟದ್ದು – ಇವುಗಳ ನಡುವಿನ ಭೇದವನ್ನು ತಿಳಿದು, ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಲು ಉತ್ತಮ ಸಂಸ್ಕಾರವಿರಬೇಕು.

ಕುಡಿದು ತೂರಾಡುವ ಅಭ್ಯಾಸದ ಪರಿಚಯದವನೊಬ್ಬ ಒಮ್ಮೆ ಸಿಕ್ಕಿದ. ಅವನು ವಿದ್ಯಾವಂತನೇ. ನನಗೆ ಆತ ಸಿಕ್ಕಿದಾಗ ಸದ್ಯ ಕುಡಿದಿರಲಿಲ್ಲ!amritha-sinchana-knowledge-of-pros-and-cons

ಯಾಕಪ್ಪಾ ಹೀಗೆ ಕುಡೀತಿ? ಕುಡಿಯಬಾರದು ಅಂತ ನಿನಗೆ ಅನ್ನಿಸುವುದೇ ಇಲ್ಲವೇ? ಈ ಕ್ಷಣದಲ್ಲಿ ಮನಸ್ಸು ಮಾಡಿದರೆ ನಾನು ಕುಡಿಯಲು ಸಾಧ್ಯವಿಲ್ಲವೇ? ಕುಡಿದರೆ ನನ್ನನ್ನು ಯಾರು ತಡೆಯುತ್ತಾರೆ? ನನ್ನ ಹತ್ತಿರ ಹಣವಿಲ್ಲವೇ? ನನ್ನ ಹತ್ತಿರ ಹಣವೂ ಇದೆ, ಬುದ್ಧಿಯೂ ಇದೆ. ಬುದ್ಧಿ ‘ಕುಡಿಯಬಾರದು, ಅದು ಕೆಟ್ಟದ್ದು’ ಅಂತ ಹೇಳುತ್ತೆ. ಬುದ್ಧಿಯ ಈ ಮಾತನ್ನು ನನ್ನ ಮನಸ್ಸು ಕೇಳುತ್ತದೆ. ಹಾಗಾಗಿ ನಾನು ಕುಡಿಯುವುದಿಲ್ಲ. ನಿನಗೆ ಬುದ್ದಿ ಇದ್ದರೂ ಅದರ ಮಾತನ್ನು ನಿನ್ನ ಮನಸ್ಸು ಕೇಳುವುದಿಲ್ಲ. ಅದು ನಿನ್ನ ಕರ್ಮ! ಕುಡಿಯದೆ ಇದ್ದುದರಿಂದ ನಾನು ನನ್ನ ಜೀವನದಲ್ಲಿ ಮಹತ್ತರವಾದ ಏನನ್ನೋ ಕಳೆದುಕೊಂಡೆ ಅಂತ ಎಂದೂ ನನಗೆ ಅನ್ನಿಸಿಲ್ಲ”- ಅಂದೆ.

ನನ್ನ ಮಾತುಗಳು ಆತನ ಮನಸ್ಸಿಗೆ ನಾಟಿರಬೇಕು. ಮುಂದೊಮ್ಮೆ ಸಿಕ್ಕಿದಾಗ, “ನಾನೀಗ ಕುಡಿಯುವುದನ್ನು ಬಿಟ್ಟಿದ್ದೇನೆ ಸಾರ್”- ಅಂತಂದ.

“ಅಭಿನಂದನೆಗಳು, ಒಳ್ಳೆಯದಾಗಲಿ” – ಅಂದೆ ನಾನು.

– ಜಿ. ವಿ. ಗಣೇಶಯ್ಯ.