ಬ್ಲೂಮ್ ಬರ್ಗ್, ಜನವರಿ,18, 2023(www.justkannada.in): ಭಾರತದ ಜನಸಂಖ್ಯೆ ಈಗಾಗಲೇ ಚೀನ ದೇಶದ ಜನಸಂಖ್ಯೆಯನ್ನು ಹಿಂದಿಕ್ಕಿದ್ದು, ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವೆನಿಸಿಕೊಂಡಿದ್ದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ರಾಷ್ಟ್ರವನ್ನು ಸುಸ್ಥಿರತೆಯ ಕಡೆಗೆ ನಡೆಸುವ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ.
ಜನಂಖ್ಯೆ ಹಾಗೂ ಜನಸಂಖ್ಯಾಶಾಸ್ತ್ರದ ಮೇಲೆ ಗಮನ ಕೇಂದ್ರೀಕರಿಸಿರುವ ವರ್ಲ್ಡ್ ಪಾಪ್ಯೂಲೇಷನ್ ರಿವ್ಯೂ ಅಂದಾಜಿನ ಪ್ರಕಾರ 2022ರ ಅಂತ್ಯಕ್ಕೆ ಭಾರತದ ಜನಸಂಖ್ಯೆ ೧.೪೧೭ ಬಿಲಿಯನ್ ಆಗಿತ್ತು. ಅಂದರೆ ಮಂಗಳವಾರದಂದು ಚೀನಾ ವರದಿ ಮಾಡಿರುವ ೧.೪೧೨ ಬಿಲಿಯನ್ ಗಿಂತ ೫ ದಶಲಕ್ಷ ಹೆಚ್ಚಾಗಿದೆ. ೧೯೬೦ರಿಂದ ಇದೇ ಮೊದಲ ಬಾರಿಗೆ ಚೀನಾದಲ್ಲಿ ಜನಸಂಖ್ಯೆ ಇಳಿಕೆ ಕಂಡಿದೆ.
ಮೂವತ್ತು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಜನಸಂಖ್ಯೆಯನ್ನು ಹೊಂದಿರುವ ಭಾರತ, ಮುಂಬರುವ ವರ್ಷಗಳಲ್ಲಿ ಆತೀ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಲಿದೆ. ಬಹುಪಾಲು ಜನಸಂಖ್ಯಾಶಾಸ್ತ್ರದ ಡಿವಿಡೆಂಡ್ ಅನ್ನು ಬಳಸಿಕೊಳ್ಳಲು ಪ್ರಧಾನ ಮೋದಿಯವರು ಪ್ರತಿ ವರ್ಷ ಉದ್ಯೋಗಕ್ಕೆ ಯೋಗ್ಯರಾಗುವ ಲಕ್ಷಾಂತರ ಜನರಿಗಾಗಿ ಉದ್ಯೋಗಿಗಳನ್ನು ಸೃಷ್ಟಿಸಬೇಕಾಗುತ್ತದೆ. ಮೇಲಾಗಿ ಭಾರತ ಕೃಷಿಯೇತರ ಉದ್ಯೋಗಗಳ ಕಡೆ ಹೆಚ್ಚು ಹೆಜ್ಜೆ ಹಾಕುತ್ತಿದೆ.
ಭಾರತ ಈ ಮೈಲಿಗಲ್ಲನ್ನು ಈ ವರ್ಷ ತಲುಪುತ್ತದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿತ್ತು. ಡಬ್ಲ್ಯುಪಿಆರ್ ಪ್ರಕಾರ ಜನವರಿ ೧೮ರಂದಿಗೆ ಭಾರತದ ಜನಸಂಖ್ಯೆ 1.423 ಬಿಲಿಯನ್ ಗೆ ಏರಿಕೆಯಾಗಿದೆ.
ಮ್ಯಾಕ್ರೊಟ್ರೆಂಡ್ಸ್ ಎಂಬ ಹೆಸರಿನ ಸಂಶೋಧನಾ ವೇದಿಕೆಯ ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆ ಹಾಲಿ ೧.೪೨೮ ಬಿಲಿಯನ್ ಆಗಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಭಾರತ ಪ್ರತಿ ವರ್ಷಗಳಿಗೊಮ್ಮೆ ಪ್ರಕಟಿಸುವ ಜನಸಂಖ್ಯೆ ವಿವರಗಳನ್ನು ೨೦೨೧ರಲ್ಲಿ ಪ್ರಕಟಿಸಿಲ್ಲ.
ಭಾರತದಲ್ಲಿ ಸಶಸ್ತ್ರ ಮೀಸಲು ಪಡೆಗಳ ಸೈನಿಕರ ಸೇವಾ ಅವಧಿ ನಾಲ್ಕು ವರ್ಷಗಳಿಗೆ ಸೀಮಿತಗೊಳಿಸುವ ಭಾರತದ ಕಳೆದ ವರ್ಷದ ಕ್ರಮವು, ಅವರಿಗಾಗಿ ಉದ್ಯೋಗಗಳನ್ನು ಸೃಷ್ಟಿಸುವುದು ಹಾಗೂ ವೇತನ ಪಾವತಿಸುವ ವ್ಯವಸ್ಥೆಯನ್ನು ಕಲ್ಪಿಸುವ ಹೆಚ್ಚಿನ ಹೊರೆಯನ್ನು ಆಡಳಿತದ ಮೇಲೆ ಹೇರಿದಂತಾಗಿದೆ. ೨೦೨೪ರ ಮೇ ತಿಂಗಳಲ್ಲಿ ಮೋದಿ ಚುನಾವಣೆ ಎದುರಿಸಲಿದ್ದು, ಹಾಲಿ ಆರ್ಥಿಕತೆಯಲ್ಲಿರುವ ಶೇ.೧೪ರಷ್ಟಿರುವ ತಯಾರಿಕಾ ಪ್ರಮಾಣವನ್ನು ಶೇ.೨೫ಕ್ಕೆ ಹೆಚ್ಚಿಸಲು ಯೋಜಿಸಿದ್ದಾರೆ.
ಕೋವಿಡ್ ನಂತರದಲ್ಲಿ ಭಾರತದ ಆರ್ಥಿಕತೆ ಕ್ಷಿಪ್ರವಾಗಿ ಬೆಳೆಯುತ್ತಿದ್ದರೂ ಹಾಗೂ ಸಾಂಕ್ರಾಮಿದಿಂದ ಬಹಳ ಚೇತರಿಸಿಕೊಂಡಿದ್ದರೂ ಸಹ 800 ದಶಲಕ್ಷ ಜನರು ಈಗಲೂ ಉಚಿತ ಪಡಿತರವನ್ನೇ ಆಧರಿಸಿದ್ದಾರೆ. ಇದು ಇಡೀ ವಿಶ್ವದಲ್ಲೇ ಅತೀ ದೊಡ್ಡ ಕಾರ್ಯಕ್ರಮವಾಗಿದೆ.
ಪ್ರಸ್ತುತ ಭಾರತ ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿದ್ದು, ಆಹಾರ ಉತ್ಪಾದನೆಯಲ್ಲಿ ಸ್ವಕ್ಷಮತೆಯನ್ನು ಹೊಂದಿದೆ. ಭಾರತ ಅಕ್ಕಿ, ಗೋಧಿ ಹಾಗೂ ಸಕ್ಕರೆಯ ಎರಡನೇ ಅತೀ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಜೊತೆಗೆ, ಅತೀ ದೊಡ್ಡ ಸಕ್ಕರೆ ಬಳಸುವ ರಾಷ್ಟ್ರವೂ ಆಗಿದೆ. ಅಡುಗೆ ತೈಲದಲ್ಲಿ ಅತೀ ದೊಡ್ಡ ಆಮದು ರಾಷ್ಟ್ರವಾಗಿದೆ. ಒಂದು ಮಾರುಕಟ್ಟೆಯಾಗಿ ಭಾರತ ವಿಶ್ವದ ಎರಡನೇ ಅತೀ ದೊಡ್ಡ ಚಿನ್ನ ಹಾಗೂ ಕಬ್ಬಿಣದ ಬೇಡಿಕೆ ಇರುವ ಹಾಗೂ ಕಚ್ಚಾ ತೈಲ ಆಮದಿನಲ್ಲಿ ಮೂರನೇ ಅತೀ ದೊಡ್ಡ ರಾಷ್ಟ್ರವಾಗಿದೆ. ಜೊತೆಗೆ ವಿಶ್ವದ ಮೂರನೇ ಅತೀ ದೊಡ್ಡ ದೇಶಿ ವಿಮಾನಯಾನ ಮಾರುಕಟ್ಟೆಯನ್ನು ಹೊಂದಿರುವ ರಾಷ್ಟ್ರವಾಗಿದೆ.
ಭಾರತದ ಜನಸಂಖ್ಯೆ ಬೆಳವಣಿಗೆ ನಿಧಾನಗೊಂಡಿದ್ದರೂ ಸಹ, ೨೦೫೦ರವರೆಗೆ ಈ ಸಂಖ್ಯೆ ಇದೇ ಗತಿಯಲ್ಲಿ ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಡಬ್ಲ್ಯುಪಿಆರ್ ಅಂದಾಜಿಸಿದೆ.
ಮತ್ತೊಂದೆಡೆ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಬ್ಯೂರೊ ಪ್ರಕಟಿಸಿರುವ ದತ್ತಾಂಶದ ಪ್ರಕಾರ ಚೀನಾ ಜನಸಂಖ್ಯೆ ಕಳೆದ ವರ್ಷದ ಹೋಲಿಕೆಯಲ್ಲಿ ೨೦೨೨ರಲ್ಲಿ ೮೫೦,೦೦೦ರಷ್ಟು ಕಡಿಮೆಯಾಗಿದೆ.
ವಿಶ್ವ ಸಂಸ್ಥೆ ಅಂದಾಜಿನ ಪ್ರಕಾರ 2022 ರಿಂದ 2050ರ ನಡುವೆ ವಿಶ್ವದ ಜನಸಂಖ್ಯೆ ಹೆಚ್ಚಳದ ಪೈಕಿ ಅರ್ಧದಷ್ಟು ಜನಸಂಖ್ಯೆ ಹೆಚ್ಚಳ ಕಾಂಗೋ, ಈಜಿಪ್ಟ್, ಇಥಿಯೊಪಿಯಾ, ನೈಜೀರಿಯಾ, ಪಾಕಿಸ್ತಾನ, ಫಿಲಿಪಿನ್ಸ್ ಹಾಗೂ ಟಾನ್ ಜೇನಿಯಾ ರಾಷ್ಟ್ರಗಳಲ್ಲಾಗಲಿದೆಯಂತೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: analysts- population – India – already- exceeded – population of China.