ಆನಂದ್ ಮಹೀಂದ್ರಗೆ ಕೊಡಗಿನ ಸವಿನೆನಪು, ಹೂಡಿಕೆಯ ಹುರುಪು

Anand Mahindra remembers Kodagu, invests zeal Anand Mahindra, a prominent industrialist who attended the investors' meet, started his speech in Kannada. He slipped back into his 60-year-old memory and shared his experiences of growing up with his parents in Kutta in Kodagu in the late 1960s. He said that being from Punjab, he has applied the lessons he learnt from the coffee plantation here in the industry

ಬೆಂಗಳೂರು, Feb.11, 2025: ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಗಣ್ಯ ಉದ್ಯಮಿ ಆನಂದ್ ಮಹೀಂದ್ರ ಕನ್ನಡದಲ್ಲೇ ಮಾತು ಆರಂಭಿಸಿದರು. ಅವರು 60 ವರ್ಷಗಳ ನೆನಪಿನಾಳಕ್ಕೆ ಜಾರಿ, 1960ರ ಆಚೀಚೆ ತಾವು ತಮ್ಮ ತಂದೆ-ತಾಯಿಗಳೊಂದಿಗೆ ಕೊಡಗಿನ ಕುಟ್ಟದಲ್ಲಿ ಬೆಳೆದ ದಿನಗಳ ಅನುಭವಗಳನ್ನು ಹಂಚಿಕೊಂಡರು. ಪಂಜಾಬಿನವರಾದ ತಾವು ಇಲ್ಲಿನ ಕಾಫಿ ಪ್ಲಾಂಟೇಶನ್ ನಲ್ಲಿ ಕಲಿತ ಪಾಠಗಳನ್ನೇ ಉದ್ಯಮದಲ್ಲೂ ಅಳವಡಿಸಿಕೊಂಡಿರುವುದಾಗಿ ಹೇಳಿದರು.

ಬಳಿಕ ಅವರು, ಮುಂದಿನ ಐದು ವರ್ಷಗಳಲ್ಲಿ ತಾವು ರಾಜ್ಯದಲ್ಲಿ ಮರುಬಳಕೆ ಇಂಧನ, ಪ್ರವಾಸ ಮತ್ತು ಆತಿಥ್ಯೋದ್ಯಮ, ವೈಮಾಂತರಿಕ್ಷ ಮತ್ತು ರಕ್ಷಣೆ, ವಿದ್ಯುಚ್ಚಾಲಿತ ತ್ರಿಚಕ್ರ ವಾಹನ ತಯಾರಿಕೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ 40 ಸಾವಿರ ಕೋಟಿ ರೂ. ಬಂಡವಾಳ ಹೂಡುವುದಾಗಿ ಘೋಷಿಸಿದರು. ಮಹೀಂದ್ರ ಸಮೂಹವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ಸದ್ಯಕ್ಕೆ 5,000 ಕೋಟಿ ರೂ. ಮೊತ್ತದ ಯೋಜನೆಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ 6,000 ಕೋಟಿ ರೂ. ಹೂಡುವುದಾಗಿ ಅವರು ಪ್ರಕಟಿಸಿದರು. ಕೊನೆಯಲ್ಲಿ `ಕರ್ನಾಟಕಕ್ಕೆ ಧನ್ಯವಾದಗಳು’ ಎನ್ನುವ ಮೂಲಕ ಕನ್ನಡದಲ್ಲೇ ಮಾತು ಮುಗಿಸಿ, ಎಲ್ಲರ ಮನ ಗೆದ್ದರು.

1 ಲಕ್ಷ ಕೋಟಿ ರೂ. ಹೂಡಿಕೆ: ಸಜ್ಜನ್ ಜಿಂದಾಲ್ :

ತಮ್ಮ ನೇತೃತ್ವದ ಜಿಂದಾಲ್ ಸಮೂಹವು ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಒಟ್ಟು 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ತೊಡಗಿಸಲಿದೆ. ಇದರಲ್ಲಿ ಉಕ್ಕು ಉತ್ಪಾದನೆ ವಲಯದಲ್ಲಿ 45 ಸಾವಿರ ಕೋಟಿ ರೂ. ಮತ್ತು ಆತಿಥ್ಯೋದ್ಯಮ, ಸೌರವಿದ್ಯುತ್, ಪರಿಸರಸ್ನೇಹಿ ಇಂಧನ ಮತ್ತು ಗ್ರೀನ್ ಹೈಡ್ರೋಜನ್ ಕ್ಷೇತ್ರಗಳಲ್ಲಿ 56 ಸಾವಿರ ಕೋಟಿ ರೂ. ಹೂಡಲಾಗುವುದು ಎಂದು ಉದ್ಯಮಿ ಸಜ್ಜನ್ ಜಿಂದಾಲ್ ಹೇಳಿದರು.

key words: Anand Mahindra, remembers Kodagu, invests zeal, GIM

SUMMARY: 

Anand Mahindra remembers Kodagu, invests zeal

Anand Mahindra, a prominent industrialist who attended the investors’ meet, started his speech in Kannada. He slipped back into his 60-year-old memory and shared his experiences of growing up with his parents in Kutta in Kodagu in the late 1960s. He said that being from Punjab, he has applied the lessons he learnt from the coffee plantation here in the industry