ಬೆಳಗಾವಿ,ಆ,12,2019(www.justkannada.in): ತಾವು ಮಾಡಿದ್ದ ಮನವಿಗೆ ಸರಿಯಾಗಿ ಸ್ಪಂದಿಸದಿದ್ದಕ್ಕೆ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನ ನೆರೆ ಪರಿಹಾರ ಕೇಂದ್ರದಲ್ಲಿದ್ದ ಮಹಿಳೆಯರು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ನೇಗಿನಹಾಳ ನೆರೆ ಪರಿಹಾರ ಕೇಂದ್ರಕ್ಕೆ ಸಂಸದ ಅನಂತ್ ಕುಮಾರ್ ಹೆಗಡೆ ಭೇಟಿ ನೀಡಿ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ಮುಂದಾದರು. ಮಲಪ್ರಭಾನದಿ ಪ್ರವಾಹದಿಂದ ಜನರು ಮನೆಗಳನ್ನ ಕಳೆದುಕೊಂಡು ಬೀದಿಗೆ ಬಿದ್ದದ್ದು, ಹೀಗಾಗಿ ತಮಗೆ ಮನೆಗಳನ್ನ ನಿರ್ಮಿಸಿಕೊಡುವಂತೆ ಅಲ್ಲಿದ್ದ ಮಹಿಳೆಯರು ತಮಗೆ ಮನೆಗಳನ್ನ ನಿರ್ಮಿಸಿಕೊಡುವಂತೆ ಸಂಸದರಿಗೆ ಮನವಿ ಮಾಡಿದ್ದಾರೆ.
ಆದರೆ ಮಹಿಳೆಯರ ಮನವಿಗೆ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಸರಿಯಾಗಿ ಸ್ಪಂದನೆ ನೀಡಿಲ್ಲ ಎನ್ನಲಾಗಿದ್ದು ಇದರಿಂದಾಗಿ ಸಂಸದರಿಗೆ ಮಹಿಳೆಯರು ತರಾಟೆ ತೆಗೆದುಕೊಂಡು ನಿಮಗೆ ಮತ ಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆ ನಂತರ ಸಂಸದ ಅನಂತ್ ಕುಮಾರ್ ಹೆಗಡೆ ಅಲ್ಲಿಂದ ನಿರ್ಗಮಿಸಿದರು.
Key words: Anant Kumar Hegde – visited -neighboring relief center-womens-took –class