ಮೈಸೂರಿನಲ್ಲಿ ಅನಂತ ಪ್ಲೇಟ್ ಬ್ಯಾಂಕ್: ಸಂಸದ ಯದುವೀರ್ ಉದ್ಘಾಟನೆ

ಮೈಸೂರು,ಏಪ್ರಿಲ್,6,2025 (www.justkannada.in):  ಕೇಂದ್ರ ಮಾಜಿ ಸಚಿವ ದಿ. ಅನಂತ್ ಕುಮಾರ್  ಅವರ  ಪತ್ನಿ  ತೇಜಸ್ವಿನಿ ಅನಂತ್ ಕುಮಾರ್ ಅವರು ನಡೆಸುತ್ತಿರುವ ಅದಮ್ಯ ಚೇತನ ಸಂಸ್ಥೆಯ ಸಾಮಾಜಿಕ ಕಾರ್ಯ ಚಟುವಟಿಕೆಯು ಮೈಸೂರಿನಲ್ಲೂ ವಿಸ್ತರಿಸುವ ದೃಷ್ಟಿಯಿಂದ ಅನಂತ ಪ್ಲೇಟ್ ಬ್ಯಾಂಕ್ ಅನ್ನು ಮೈಸೂರಿನ ಲಕ್ಷ್ಮಿಪುರಂನಲ್ಲಿ ನಿರ್ಮಿಸಿದ್ದಾರೆ.

ಇಂದು  ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಉದ್ಘಾಟನೆ ನೆರವೇರಿಸಿದರು.  ಈ ಸಂದರ್ಭದಲ್ಲಿ ವಿಧಾನ ಪರಿಷತ್ ನ ಮಾಜಿ ಸದಸ್ಯ ಕೃಷ್ಣಭಟ್ಟರು, ಪ್ರೊ. ಕೃಷ್ಣೇಗೌಡ, ಜಿಎಸ್ಎಸ್ ಶ್ರೀಹರಿ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಿವಕುಮಾರ್, ನಗರ ಪಾಲಿಕೆಯ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್, ಎಂಐಟಿ ಸಂಸ್ಥೆಯ ಸಂಚಾಲಕ ಮುರಳಿ ಅದಮ್ಯ ಚೇತನದ ಸದಸ್ಯ ಬಂಧುಗಳು ಹಾಗೂ ಅನಂತ್ ಕುಮಾರ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಪರಿಕರಗಳು ಹೆಚ್ಚಾಗಿ ಉಪಯೋಗ ಮಾಡುತ್ತಿರುವುದರಿಂದ ಅದರ ಬದಲಾಗಿ ಸ್ಟೀಲ್ ತಟ್ಟೆ, ನೀರಿನ ಲೋಟ ಕಾಫಿಯ ಲೋಟ, ಸ್ವೀಟ್ ಬೌಲ್, ಚಮಚ, ಹಿಡಿಲೋಟ ಇವುಗಳನ್ನು ಬಳಸುವುದನ್ನು ಉತ್ತೇಜಿಸುವ ದೃಷ್ಟಿಯಿಂದ ಅನಂತ ಪ್ಲೇಟ್ ಬ್ಯಾಂಕನ್ನು ನಿರ್ಮಿಸಲಾಗಿದೆ.  ಇದು ಉಚಿತ ಯೋಜನೆಯಾಗಿದ್ದು ಮುಂಗಡ ಹಣ ಕಟ್ಟಿ ವಸ್ತುಗಳು ಹಿಂದಿರುಗಿಸಿದ ನಂತರ ಹಣ ಪಡೆದುಕೊಳ್ಳಬಹುದು.

Key words: Anantha Plate Bank, Mysore, MP Yaduveer, inaugurates