ಆಂಧ್ರಪ್ರದೇಶ, ಮೇ 23, 2019 : (www.justkannada.in news) ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಖಚಿತವಾಗುತ್ತಿದ್ದಂತೆ ಸಿಎಂ ಚಂದ್ರಬಾಬುನಾಯ್ಡು, ಸಂಜೆ ವೇಳೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಸಿಎಂ ಸ್ಥಾನಕ್ಕೆ ಅಧಿಕೃತ ರಾಜೀನಾಮೆ ನೀಡಲಿದ್ದಾರೆ.
ಇತ್ತ ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ ಸಿಎಂ ಸ್ಥಾನಕ್ಕೇರಲು ಸಿದ್ಧತೆ ನಡೆಸುತ್ತಿದ್ದಾರೆ. ವೈಎಸ್ ಆರ್ ಕಾಂಗ್ರೆಸ್ ಪಕ್ಷ 150 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇದರ ಸಂಪ್ರದಾಯಿಕ ಎದುರಾಳಿ ತೆಲುಗು ದೇಶಂ ಪಾರ್ಟಿ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ ಆಂಧ್ರಪ್ರದೇಶದಲ್ಲಿ ಅಚ್ಚರಿಯ ಫಲಿತಾಂಶ ಕಂಡು ಬಂದಿದೆ. ಇದು ಚಂದ್ರಬಾಬುನಾಯ್ಡು ಅವರ ಕನಸಿಗೆ ತಣ್ಣೀರು ಎರಚಿದಂತಾಗಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅಕ್ರಮಗಳ ಆರೋಪಗಳು ಕೇಳಿಬಂದಿದ್ದು ಕೂಡ ಜನರಲ್ಲಿ ನಾಯ್ಡು ಬಗ್ಗೆ ಅಸಮಾಧಾನ ಉಂಟಾಗಲು ಕಾರಣ. ಜತೆಗೆ ಚಂದ್ರಬಾಬುನಾಯ್ಡು, ಎನ್ ಡಿಎಗೆ ಬೆಂಬಲ ಸೂಚಿಸಿ ಬಳಿಕ ವಾಪಸ್ ತೆಗೆದುಕೊಂಡದ್ದು, ಆನಂತರ ವೈಎಸ್‌ಆರ್ ಜಗನ್ ಮೋಹನ್ ರೆಡ್ಡಿ ಎನ್‌ಡಿಎಗೆ ಬೆಂಬಲ ನೀಡಿದ್ದು ಸಹ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಆಂಧ್ರಪ್ರದೇಶದಲ್ಲೂ ಅಭಿವೃದ್ದಿಯಾಗಬಹುದು ಎಂಬುದು ಕೂಡ ಇಲ್ಲಿನ ಮತದಾರನ ನಿರೀಕ್ಷೆಗಳಲ್ಲಿ ಒಂದಾಗಿತ್ತು.
–
key words : andrapradesh-telugu-desham-bjp-ysr-jagan-mohan-reddy