ರಾಜ್ಯದಲ್ಲಿ ನ.8ರಿಂದ ಅಂಗನವಾಡಿ ಕೇಂದ್ರಗಳು ಓಪನ್: ಸರ್ಕಾರದಿಂದ ಗೈಡ್ ಲೈನ್ ಬಿಡುಗಡೆ.

ಬೆಂಗಳೂರು,ನವೆಂಬರ್,3,2021(www.justkannada.in):  ರಾಜ್ಯದಲ್ಲಿ ಕೊರೋನಾ ಕಡಿಮೆಯಾದ ಹಿನ್ನೆಲೆ ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನ ತೆರೆಯಲಾಗಿದ್ದು ಇದೀಗ ಅಂಗನವಾಡಿ ಕೇಂದ್ರಗಳನ್ನು ತೆರಯಲು ಸರ್ಕಾರ ಮುಂದಾಗಿದೆ.

ನವೆಂಬರ್ 8 ರಿಂದ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನ ತೆರೆಯಲು ಅನುಮತಿ ನೀಡಲಾಗಿದ್ದು ಇದಕ್ಕೆ ರಾಜ್ಯ ಸರ್ಕಾರ ಗೈಡ್ ಲೈನ್ ಬಿಡುಗಡೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿ ಈ ಕೆಳಕಂಡಂತಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ಮಕ್ಕಳ ಪೋಷಕರು ಸಹ ಎರಡು ಡೋಸ್ ಲಸಿಕೆ ಪಡೆದಿರಬೇಕು.

ಅಂಗನವಾಡಿ ಕೇಂದ್ರವನ್ನ ರಾಸಾಯನಿಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು.

ಅಂಗನವಾಡಿ ಆರಂಭಿಸುವ ಮುನ್ನ ಸ್ಥಳೀಯ ಗ್ರಾಮಪಂಚಾಯಿತಿ ಗಮನಕ್ಕೆ ತರಬೇಕು.

ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಹಾಜರಾಗಲು  ಪೋಷಕರ ಅನುಮತಿ ಪತ್ರ ಕಡ್ಡಾಯ.

ಕೋವಿಡ್ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇದ್ದರೇ ಮಾತ್ರ ಅಂಗನವಾಡಿ ಕೇಂದ್ರ ತೆರೆಯಲು ಅವಕಾಶವಿರುತ್ತದೆ.

Key words: Anganwadi centers- open -november 8th – state-  Release -GuideLine

ENGLISH SUMMARY…

Anganwadi centers to open from November 8: Govt. releases guidelines
Bengaluru, November 3, 2021 (www.justkannada.in): Schools and Colleges have started functioning following a decline in the number of Corona cases in the State. Now the government has decided to commence Anganwadi centers also.
The government has permitted to open Anganwadi centers in the State from November 8 and has issued guidelines. The guidelines issued by the Women and Child Development Department are as follows:
• All the Anganwadi activists and assistants should compulsorily have taken both the doses of COVID vaccine. Parents of the children should also have taken two doses of the vaccine.
• The Anganwadi center premises should be completely sanitized and cleaned.
• Prior information should be given to the respective gram panchayat about commencing the Anganwadi center.
• Parents’ permission is compulsory to send their children to the Anganwadi centers.
• Permission will be given to open the Anganwadi centers only in places where the COVID positivity rate is lesser than 2%.
Keywords: COVID-19 Pandemic/ State Govt./ Anganwadi centers/ commence/ November 8