ಮೈಸೂರು,ಡಿಸೆಂಬರ್,05,2020(www.justkannada.in) : ಮನೆ,ಮನೆ ಸಮೀಕ್ಷೆ ಕೈಗೊಂಡು 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಆ ಮಕ್ಕಳನ್ನು ಅಂಗನವಾಡಿ, ಶಾಲೆಗೆ ನೋಂದಣಿ ಮಾಡುವಂತೆ ಗ್ರಾಪಂ ಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರಕಾರವು ಸುತ್ತೋಲೆ ಹೊರಡಿಸಿದೆ.
ಸಂವಿಧಾನವು ಕಲಂ 21(ಎ) ಪ್ರಕಾರ 6 ರಿಂದ 14 ವರ್ಷದ ಪ್ರತಿ ಮಗು 8 ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯುವುದು ಮೂಲಭೂತ ಹಕ್ಕಾಗಿರುತ್ತದೆ. ಉಲ್ಲೇಖ(1)ರ ಸುತ್ತೋಲೆ ಮತ್ತು ಉಲ್ಲೇಖ(2)ರ ಸರ್ಕಾರದ ಪತ್ರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಸ್ಥಳೀಯ ಸರ್ಕಾರಗಳು ಕೈಗೊಳ್ಳಬೇಕಾದ ಕಾರ್ಯಕ್ರಮದ ಮಾರ್ಗಸೂಚಿಗಳ ಬಗ್ಗೆ ಸವಿವರವಾಗಿ ತಿಳಿಸಲಾಗಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು the Karnataka right of children to free and compulsory education rules 2012ರನ್ವಯ ಗ್ರಾಮಪಂಚಾಯಿತಿಗಳು ಗ್ರಾಮ ಶಿಕ್ಷಣ ರಿಜಿಸ್ಟರ್ ನಿರ್ವಹಿಸಬೇಕಾಗಿರುತ್ತದೆ. ಈ ಬಗ್ಗೆ ಉಲ್ಲೇಖ(1)ರ ಸುತ್ತೋಲೆಯಲ್ಲಿ ಎಲ್ಲಾ ಗ್ರಾಪಂ ಗಳು ಗ್ರಾಮ ಶಿಕ್ಷಣ ರಿಜಿಸ್ಟರ್ ನಿರ್ವಹಿಸಲು ತಿಳಿಸಲಾಗಿದೆ.
ಮಕ್ಕಳ ಹಾಜರಾತಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆಯು ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ.
key words : anganwadi-donate-children-school-Home-Home-Survey-Circular-Government-Grapham