ಬೆಂಗಳೂರು, ಜುಲೈ 30, 2019 (www.justkannada.in): ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಫೈನಲ್ ಪಂದ್ಯದ ಸೂಪರ್ ಓವರ್ ಟೈ ಆದರೆ ವಿನ್ನರ್ ಘೋಷಣೆಗೆ ಮೊರೆ ಹೋಗುತ್ತಿರುವ ಬೌಂಡರಿ ಲೆಕ್ಕಾಚಾರ ನಿಯಮದ ಬಗ್ಗೆ ಚರ್ಚಿಸಲು ಕಮಿಟಿ ರಚಿಸಿದ್ದು, ಅದರ ನೇತೃತ್ವವನ್ನು ಕನ್ನಡಿಗ ಅನಿಲ್ ಕುಂಬ್ಳೆವಹಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ಮುಗಿದ ಐಸಿಸಿ ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಟೈ ಆಗಿತ್ತು. ನಂತರ ನಡೆದ ಸೂಪರ್ ಓವರ್ ಕೂಡ ಟೈ ಆಗಿದ್ದರಿಂದ ಮೊದಲೇ ನಿರ್ಧರಿತವಾಗಿದ್ದ ಹೆಚ್ಚು ಬೌಂಡರಿಗಳಿಸಿದ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ಈ ನಿಯಮವನ್ನು ವಿಶ್ವದಾದ್ಯಂತ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದರು. ಹೀಗಾಗಿ ಈ ವಿಚಾರವನ್ನು ಐಸಿಸಿ ಕ್ರಿಕೆಟ್ ಕಮಿಟಿ ಗಂಭೀರವಾಗಿ ತೆಗೆದುಕೊಂಡಿದ್ದು, 2020ರ ಮೊದಲ ಚತುರ್ಮಾಸದಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಈ ನಿಯಮದ ಬಗ್ಗೆ ಚರ್ಚೆ ನಡೆಸುವುದಾಗಿ ಹಾಗೂ ಈ ಚರ್ಚೆಯ ನೇತೃತ್ವವನ್ನು ಅನಿಲ್ ಕುಂಬ್ಳೆವಹಿಸಿಕೊಳ್ಳುತ್ತಿದ್ದಾರೆ ಎಂದು ಐಸಿಸಿ ಜನರಲ್ ಮ್ಯಾನೇಜರ್ ಜಿಯೊಫ್ ಜೆಫ್ ಅಲ್ಲಾರ್ಡೈಸ್ ತಿಳಿಸಿದ್ದಾರೆ.